Wednesday, January 22, 2025

ಸ್ವರೂಪ್ ಬೇರೆ ಅಲ್ಲ ನನ್ನ ಮಕ್ಕಳು ಬೇರೆ ಅಲ್ಲ : ಭವಾನಿ ರೇವಣ್ಣ

ಹಾಸನ : ಜೆಡಿಎಸ್ ಪಕ್ಷಕ್ಕೆ ರಾಜಕೀಯವಾಗಿ ಕಂಟಕವಾಗಿದ್ದ ಹಾಸನ ಟಿಕೆಟ್ ಗೊಂದಲ ಇತ್ಯರ್ಥವಾಗಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ನಿನ್ನೆ, ಮೊನ್ನೆಯವರೆಗೂ ಟಿಕೆಟ್​ಗಾಗಿ ತೆರೆಮರೆಯಲ್ಲೇ ಫೈಟ್ ನಡೆಸುತ್ತಿದ್ದ ಜೆಡಿಎಸ್ ನಾಯಕರು ಇದೀಗ ಒಂದೇ ವೇದಿಕೆ ಏರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಹೌದು, ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಎಲ್ಲಾ ವಿಷಯಗಳನ್ನು ಮರೆತು ಹಾಸನ ಅಭ್ಯರ್ಥಿ ಸ್ವರೂಪ್ ಗೌಡ ಪರ ಬ್ಯಾಟ್ ಬೀಸಿದ್ದಾರೆ. ಹಾಸನದಲ್ಲಿ ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಅಲ್ಲದೆ, ಭವಾನಿ ರೇವಣ್ಣ ಭಾಷಣ ಮಾಡುವ ವೇಳೆ ಸ್ವರೂಪ್ ಗೌಡ ಅವರನ್ನು ತಮ್ಮ ಪಕ್ಕದಲ್ಲೇ ನಿಲ್ಲಿಸಿಕೊಂಡು ಮಾತನಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ಗೆ ‘ಕೈ’ ಕೊಟ್ಟು ಜೆಡಿಎಸ್ ಸೇರಿದ ರಾಜಗೋಪಾಲರೆಡ್ಡಿ

ಸ್ವರೂಪ್ ಗೆದ್ದೇ ಗೆಲ್ತಾನೆ

ಸ್ವರೂಪ್ ಬೇರೆ ಅಲ್ಲ ನನ್ನ‌ ಮಕ್ಕಳು ಬೇರೆ ಅಲ್ಲ. ಹಿಂದೆ‌ ಇದ್ದ ಎಲ್ಲಾ ವಿಚಾರಗಳನ್ನು ಮರೆಯಬೇಕು. ನಾವು ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಇನ್ನು ಇಪ್ಪತ್ತು ದಿನ ಮಾತ್ರ ಚುನಾವಣೆಗೆ ಬಾಕಿ ಇದೆ. ಸ್ವರೂಪ್ ಈ‌ ಕ್ಷೇತ್ರದಲ್ಲಿ ಗೆದ್ದೆ ಗೆಲ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಪರಿಪೂರ್ಣವಾಗಿ ಸ್ವರೂಪ್​ಗೆ ಆಶೀರ್ವಾದ ಮಾಡುತ್ತಿದ್ದೇನೆ. ಈ ಬಾರಿ ಸ್ವರೂಪ್‌ ಅವರನ್ನು ಗೆಲ್ಲಿಸಲು ನಾವು ರೆಡಿ‌ ಎಂದು ಭವಾನಿ ರೇವಣ್ಣ ಅವರು ಸ್ವರೂಪ್ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ. ಇದೇ ವೇಳೆ ಸ್ವರೂಪ್ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES