Monday, December 23, 2024

ಹಿರೇಕೆರೂರಿನಲ್ಲಿ ಬಿ.ಸಿ ಪಾಟೀಲ್ ಜಯಬೇರಿ ಬಾರಿಸುತ್ತಾರೆ : ಬಿ.ವೈ ವಿಜಯೇಂದ್ರ

ಬೆಂಗಳೂರು : ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ  ಜಯಬೇರಿ ಬಾರಿಸುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ನಾಮಪತ್ರ ಸಲ್ಲಿಕೆ ವೇಳೆ ಬಿ.ವೈ ವಿಜಯೇಂದ್ರ ಸಾಥ್ ನೀಡಿದರು. ಬಳಿಕ ಮಾತನಾಡಿರುವ ಅವರು, ಬಿ.ಸಿ ಪಾಟೀಲ್ ಅವರನ್ನು ಹಾಡಿ ಹೊಗಳಿದ್ದಾರೆ.

ಬಿಜೆಪಿ ಪಕ್ಷ ದೊಡ್ಡ ಆಲದಮರ, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಅಲ್ಲಿಗೆ ಹೋಗಿದ್ದಾರೆ. ಅವರಿಗೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ವಿಜಯೇಂದ್ರ ಕುಟುಕಿದ್ದಾರೆ.

ಇದನ್ನೂ ಓದಿ : ಜಗದೀಶ್ ಶೆಟ್ಟರ್ ವಿರುದ್ಧ ಗೆದ್ದು ಬರ್ತೀವಿ : ಮಹೇಶ ಟೆಂಗಿನಕಾಯಿ

ಯುವಕರಿಗೆ ಹೆಚ್ಚು ಅವಕಾಶ

ಲಿಂಗಾಯತ ಸಮುದಾಯದ ಯುವ ನಾಯಕನಿಗೆ ಸಿಎಂ ಸ್ಥಾನ ನೀಡುವ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರದ ವರುಷ್ಠರು ಕೇಲವು ಹಿರಿಯರಿಗೆ ಅವಕಾಶ ಕೊಟ್ಟಿಲ್ಲ ಅಂದ್ರೆ ಅದರಲ್ಲಿ ಸದುದ್ದೇಶವಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ, ಪಕ್ಷದಲ್ಲಿ ಹೊಸ ನಾಯಕತ್ವ ಸೃಷ್ಟಿಯಾಗಬೇಕು. ಪಕ್ಷದಲ್ಲಿ ಹೆಚ್ಚು ಯುವಕರಿಗೆ ಅವಕಾಶ ಕೊಡಬೇಕು ಎಂದು ಆಲೋಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಿರೇಕೆರೂರು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ರೋಡ್ ಶೋ ನಡೆಸಿದರು. ಈ ವೇಳೆ ಸಂಸದ ಶಿವಕುಮಾರ್ ಉದಾಸಿ ಸಾಥ್ ಹಾಗೂ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು. ಹಿರೇಕೆರೂರಿನ ಶಂಕರ್ ರಾವ್ ವೃತ್ತದಿಂದ ಸರ್ವಜ್ಞ ವೃತ್ತದವರೆಗೆ ನಡೆದ ರೋಡ್ ಶೋನಲ್ಲಿ ಅಪರಾ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES