Wednesday, January 22, 2025

ಎರಡನೇ ಬಾರಿ ಅಶೋಕ್ ಜಯರಾಮ್ ನಾಮಪತ್ರ ಸಲ್ಲಿಕೆ

ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರು ಇಂದು ಎರಡನೇ ಬಾರಿ ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಸುಮಾರು 50ಸಾವಿರಕ್ಕೂ ಅಧಿಕ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ರ್ಯಾಲಿ ನಡೆಸುವ ಮೂಲಕ ಬೃಹತ್ ಶಕ್ತಿಪ್ರದರ್ಶನ ಮಾಡಿದರು. 

ಕುಟುಂಬ ಸಮೇತರಾಗಿ ಮಂಡ್ಯ ಚುನಾವಣಾಧಿಕಾರಿಗಳಿಗೆ ಎರಡನೇ ಹಂತದ ನಾಮಪಾತ್ರವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಪ್ರಭಾವತಿ ಜಯರಾಮ್, ಅಕ್ಷತಾ ಅಶೋಕ್ ಜಯರಾಮ್, ಅನುರಾಧ ಜಯರಾಮ್ ಮತ್ತು ಡಾ.ಸಿ.ಎಂ.ಪರಮೇಶ್ವರ್ ಉಪಸ್ಥಿತರಿದ್ದರು.

ನಾಮಪತ್ರಕ್ಕೂ ಮುನ್ನ ದೇವರ ದರ್ಶನ

ಮಂಡ್ಯ ತಾಲ್ಲೂಕು ಕಸಬಾ ಹೋಬಳಿಯ ಹೆಚ್.ಕೋಡಿಹಳ್ಳಿ ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಮಹಾಗಣಪತಿ, ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅಶೋಕ್ ಜಯರಾಮ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಜಗದೀಶ್ ಶೆಟ್ಟರ್ ವಿರುದ್ಧ ಗೆದ್ದು ಬರ್ತೀವಿ : ಮಹೇಶ ಟೆಂಗಿನಕಾಯಿ

ಸಂಸದೆ ಸುಮಲತಾ ಭೇಟಿ

ಇನ್ನೂ ಮಂಡ್ಯ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನೆ ಅಶೋಕ್ ಜಯರಾಮ್ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ತಮ್ಮ ಗೆಲುವಿಗೆ ಸಹಕಾರ ಕೋರಿದ್ದಾರೆ.

ಈ ವೇಳೆ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಮಂಡ್ಯದ ನನ್ನ ಸ್ವಾಭಿಮಾನಿ ಜನರು ನನಗೆ ಆಶೀರ್ವಾದ ಮಾಡಿದಂತೆ ಅಶೋಕ್ ಜಯರಾಮ್ ಅವರಿಗೆ ಮತ ಹಾಕುವ ಮೂಲಕ ಗೆಲುವಿಗೆ ಕಾರಣರಾಗಬೇಕು ಎಂದು ಮಂಡ್ಯ ಜನತೆಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES