Monday, December 23, 2024

ಅಶೋಕ್ ಜಯರಾಮ್ ಸಮ್ಮುಖದಲ್ಲಿ ಬಿಜೆಪಿ ಸೇರಿದ ‘ಕೈ’ ನಾಯಕರು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಸಕ್ಕರೆ ನಾಡು ಮಂಡ್ಯದಲ್ಲಿ ಅಸಮಾಧಾನಿತ ನಾಯಕರು ಬಿಜೆಪಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ.

ಹೌದು, ಬಿಜೆಪಿ ಸಿದ್ಧಾಂತ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರ ಜನಪರ ಕಾಳಜಿ ಮೆಚ್ಚಿ ನೂರಾರು ಮುಖಂಡರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಅಶೋಕ್ ಜಯರಾಮ್ ಕಚೇರಿ ಆವರಣದಲ್ಲಿ ಮಂಡ್ಯ ನಗರದ 35ನೇ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತ ದುರ್ಗಿ ಹಾಗೂ 22ನೇ ವಾರ್ಡ್ ನ ಜೆಡಿಎಸ್ ಕಾರ್ಯಕರ್ತ ಕಿಟ್ಟಿ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ : ಎರಡನೇ ಬಾರಿ ಅಶೋಕ್ ಜಯರಾಮ್ ನಾಮಪತ್ರ ಸಲ್ಲಿಕೆ

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಮಲ್ಲಾಘಟ್ಟ ಗ್ರಾಮದ ಅವಿರಾಜ್ ಹಾಗೂ ನಂದೀಶ್ ಅವರು ಬಿಜೆಪಿ ಅಭ್ಯರ್ಥಿಯಾದ ಅಶೋಕ್ ಜಯರಾಮ್ ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರ್ಪಡೆಯಾದರು. ನೂತನವಾಗಿ ಸೇರ್ಪಡೆಗೊಂಡ ಮುಖಂಡರನ್ನು ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಸ್ವಾಗತಿದ್ದಾರೆ.

ವಿದ್ಯಾಗಣಪತಿ ದೇವಸ್ಥಾನದಲ್ಲಿ ಪೂಜೆ

ಮಂಡ್ಯ ಗಾಂಧಿನಗರದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಅಶೋಕ್ ಜಯರಾಮ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES