Wednesday, January 22, 2025

ರಾಜ್ಯದಲ್ಲಿ 130 ಸ್ಥಾನ ಪಡೆದು ಬಹುಮತ ಪಡೆಯುವ ವಿಶ್ವಾಸ ಇದೆ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಈ ಸಲದ ಎಲೆಕ್ಷನ್​ನಲ್ಲಿ ರಾಜ್ಯದಲ್ಲಿ ನಾವು 130 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸ ನಮ್ಮ ಪಕ್ಷಕ್ಕೆ ಇದೆ.ನಮ್ಮದು ಸಮುದಾಯ ಆಧಾರಿತ ಹಾಗೂ ಕಾರ್ಯಕರ್ತರ ದೊಡ್ಡ ಪಡೆ ಇರುವ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹೌದು, ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ನಂಜನಗೂಡಿಗೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಕೆಲವು ನಾಯಕರು ಪಕ್ಷದಿಂದ ಹೋಗಿದ್ದರೂ ನಮ್ಮದು ಇತರೆ ಪಕ್ಷಗಳಂತೆ ನಾಯಕ ಆಧಾರಿತ ಪಕ್ಷ ಅಲ್ಲ.

ಇದನ್ನೂ ಓದಿ : ನಾಳೆ ದೊಡ್ಡಬಳ್ಳಾಪುರ ಅಭ್ಯರ್ಥಿ ಧೀರಜ್ ಮುನಿರಾಜು ನಾಮಪತ್ರ ಸಲ್ಲಿಕೆ

ಆದ್ದರಿಂದ ಈ ರೀತಿಯ ಪಕ್ಷಾಂತರ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಕಾಂಗ್ರೆಸ್ ಅವರಿಗೆ ಸುಮಾರು 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ಅವರು ಪೂರ್ಣ ಪಟ್ಟಿ ಬಿಡುಗಡೆ ಮಾಡದೇ ವೀರಾವೇಶದಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಬಿಜೆಪಿ ಬಲಿಷ್ಠ ಇರುವ ಕಡೆಗಳಲ್ಲಿ ಪಕ್ಷಾಂತರ ಮಾಡಿಸಿ ಟಿಕೆಟ್ ಕೊಟ್ಟರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಶೆಟ್ಟರ್ ದುರ್ಜನರ ಸಂಗ ಮಾಡಿದ್ದಾರೆ

ಜಗದೀಶ್ ಶೆಟ್ಟರ್ ಅವರು ಸಜ್ಜನರು. ದುರ್ದೈವವಷಾತ್ ಅವರು ದುರ್ಜನರ ಸಂಗ ಮಾಡಿದ್ದಾರೆ. ಬಸವಣ್ಣವನರು ಹೇಳಿದ್ದರು ದುರ್ಜನರ ಸಂಗ ಮಾಡಬೇಡಿ ಅಂತ. ಸಜ್ಜನರ ಸಂಗದಿಂದ ಈಗ ದುರ್ಜನರ ಸಂಗಕ್ಕೆ ಹೋಗಿದ್ದಾರೆ ಎಂದು ಶೆಟ್ಟರ್ ಕಡೆಗಣನೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರಿಸಿದರು

ವರುಣಾ ನಮ್ಮ ಪರವಾಗಿದೆ 

ವರುಣಾದಲ್ಲಿ ಜಿದ್ದಾಜಿದ್ದಿ ಪೈಪೋಟಿ ಇದ್ದರು ಅದು ನಮ್ಮ ಪರವಾಗಿದೆ. ರಾಜಕೀಯ ಮತ್ತು ಸಾಮಾಜಿಕ ಸಮೀಕರಣದ ಆಧಾರದಲ್ಲಿ ವರುಣಾದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ. ಸೋಮಣ್ಣ ಅವರಂತಹ ನಾಯಕರನ್ನು ಅಲ್ಲಿಗೆ ಹಾಕಿದ್ದೇವೆ ಎಂದ ಮೇಲೆ ನಾವು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ನಾಮಪತ್ರ ಹಿಂಪಡೆಯುವ ದಿನದ ನಂತರ ಪ್ರಧಾನಿ ಮೋದಿ ಅವರ ಪ್ರಚಾರ ಶುರು ಆಗಲಿದೆ.ನನಗೆ ಜನ

ಬೆಂಬಲ ಇದೆ 

ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅವರು ಇನ್ನೂ ಅಭ್ಯರ್ಥಿಯ ಘೋಷಣೆ ಯಾಕೆ ಮಾಡಿಲ್ಲವೋ ನನಗೆ ಗೊತ್ತಿಲ್ಲ. ನಾನು ನಾಂಪತ್ರ ಸಲ್ಲಿಸಿ ಬಂದಿದ್ದೇನೆ. ನನಗೆ ನನ್ನ ಕ್ಷೇತ್ರದ ಜನರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಎದುರಾಳಿ ಯಾರು ಅನ್ನೋದು ಮುಖ್ಯ ಅಲ್ಲ. ಜನಾಭಿಪ್ರಾಯ ಮತ್ತು ಜನ ಬೆಂಬಲ ಮುಖ್ಯ. ಅದು ಬಹಳ ದೊಡ್ಡ ಪ್ರಮಾಣದಲ್ಲಿ ನನ್ನ ಮೇಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

RELATED ARTICLES

Related Articles

TRENDING ARTICLES