ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಕುರಿತ ವಿಷಯಗಳನ್ನು ಹೆಚ್ಚು ಪೋಸ್ಟ್ ಮಾಡುತ್ತಿದ್ದಾರೆ.
ಪ್ರಜಾಕೀಯ ಪಕ್ಷದ ಮೂಲಕ ರಾಜ್ಯ ರಾಜಕೀಯಕ್ಕೆ ಕಾಲಿಟ್ಟಿರುವ ನಟ ಉಪೇಂದ್ರ ಅವರು ಚುನಾವಣೆ ಕುರಿತು ಸಣ್ಣದೊಂದು ನೀತಿ ಕಥೆ ಹಂಚಿಕೊಂಡಿದ್ದಾರೆ. ಆ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಡುತ್ತಿದ್ದಾರೆ.
ಒಂದು ಕಾಡಿನಲ್ಲಿ, ಅಲ್ಲಾ ನಾಡಿನಲ್ಲಿ ಸಿಂಹ ಹುಲಿಗಳಂತಾ ಯುವಕ ಹಾಗೂ ಯುವತಿಯರಿಗೆ ಕೆಲವು ನರಿಗಳು ಹಲವು ಕುರಿಗಳ ಮಂದೆಯನ್ನು ತೋರಿಸಿ, ನೋಡಿ ಎಲ್ಲಾರೂ ಕುರಿಗಳೇ ಎಂದಾಗ ತಾವೂ ಕುರಿಯಾಗಿ ಕುರಿಗಳ ಜೊತೆ ಸೇರಿ ನರಿಗಳನ್ನು ನಾಯಕರನ್ನಾಗಿ ಎಲೆಕ್ಟ್ ಮಾಡಿಕೊಂಡು ಹುಲಿ ಸಿಂಹಗಳು ಕುರಿಗಳಾದವು ಎಂದು ಉಪೇಂದ್ರ ಹೇಳಿದ್ದಾರೆ.
ಒಂದು ಕಾಡಿನಲ್ಲಿ ಅಲ್ಲಾ ನಾಡಿನಲ್ಲಿ ಸಿಂಹ ಹುಲಿಗಳಂತಾ ಯುವಕ ಯುವತಿಯರಿಗೆ ಕೆಲವು ನರಿಗಳು ಹಲವು ಕುರಿಗಳ ಮಂದೆಯನ್ನು ತೋರಿಸಿ ನೋಡಿ ಎಲ್ಲಾರೂ ಕುರಿಗಳೇ ಎಂದಾಗ ತಾವೂ ಕುರಿಯಾಗಿ ಕುರಿಗಳ ಜೊತೆ ಸೇರಿ ನರಿಗಳನ್ನು ನಾಯಕರನ್ನಾಗಿ ಎಲೆಕ್ಟ್ ಮಾಡಿಕೊಂಡು ಹುಲಿ ಸಿಂಹಗಳು ಕುರಿಗಳಾದವು. #Prajaakeeya 🛺 #UttamaPrajaakeeyaParty
— Upendra (@nimmaupendra) April 18, 2023
ಇದನ್ನೂ ಓದಿ : ನೆಟ್ಟಿಗರ ತರಾಟೆಗೆ ಉಪೇಂದ್ರ ರಿಯಾಕ್ಷನ್ : ಅಬ್ಬಬ್ಬಾ ಉಪ್ಪಿ ಟ್ವೀಟ್ ಗೆ ಏನ್ ಕಾಮೆಂಟ್ಸ್
ಇದರಲ್ಲಿ ನೀವು ಯಾರು ?
ಪಕ್ಷಗಳಿಗೆ ರಾಜ್ಯದ ಮೇಲೆ, ಜನರ ತೆರಿಗೆ ಹಣದ ಮೇಲಿನ ಅಧಿಕಾರ ಬೇಕು. ಪಕ್ಷದ ಮುಖಂಡರಿಗೆ ಟಿಕೆಟ್ ಬೇಕು. ಪಕ್ಷದ ಕಾರ್ಯಕರ್ತರಿಗೆ ತಮ್ಮ ಕೆಲಸ ಆಗಲು ತಮ್ಮ ಪಕ್ಷ ಗೆಲ್ಲಬೇಕು. ಕೆಲವು ನಿರ್ಗತಿಕ ಮತದಾರರಿಗೆ ಮತ ನೀಡಲು ಹಣ ಹೆಂಡ ಸೀರೆ ಕುಕ್ಕರ್ ಬೇಕು. ಕೆಲವು ಅತಿ ಬುದ್ದಿವಂತ ಮತದಾರರಿಗೆ ಪ್ರಭಲ ನಾಯಕ ಮತ್ತು ಪ್ರಚಾರದ ವೇವ್ ಬೇಕು. ಹೋಪ್ ಕಳೆದುಕೊಂಡ ಕೆಲವು ಮತದಾರರಿಗೆ ರಜಾ ಬೇಕು. ನಾಯಕತ್ವದ ಗುಣ ಇರುವ ಜವಾಬ್ದಾರಿ ತೆಗೆದುಕೊಳ್ಳಲು ರೆಡಿ ಇರುವ ಮತದಾರರು ಎಷ್ಟಿದ್ದೀರಿ ? ಯಾರಿದ್ದೀರಿ ? ಎಂದು ಪೋಸ್ಟ್ ಮಾಡಿದ್ದಾರೆ.
ಇದರಲ್ಲಿ ನೀವು ಯಾರು ?
#Prajaakeeya 🛺 #UttamaPrajaakeeyaParty #UPP #UPPforKARNATAKA#SilentRevolution #UPPForTrueDemocracy #Upendra @priyankauppi pic.twitter.com/sfMUBbGqHV
— Upendra (@nimmaupendra) April 18, 2023