Thursday, January 23, 2025

ಕಂಟಕ ರಾಹುಗ್ರಸ್ತ ಸೂರ್ಯಗ್ರಹಣ : ನಿಮ್ಮ ರಾಶಿಗಳ ಗ್ರಹಣದ ಫಲಾಫಲ ಇಲ್ಲಿದೆ ನೋಡಿ

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರವಾರ ನಡೆಯಲಿರುವ ರಾಹುಗ್ರಸ್ತ ಸೂರ್ಯಗ್ರಹಣ ಕೆಲವು ರಾಶಿಯವರಿಗೆ ಅನುಕೂಲ ಹಾಗೂ ಇನ್ನೂ ಕೆಲವು ರಾಶಿಯವರಿಗೆ ಅನಾನುಕೂಲ ಉಂಟು ಮಾಡುವುದು. ಈ ಬಾರಿ ಏಪ್ರಿಲ್ 20ರಂದು ಸಂಭವಿಸಲಿರುವ ಗ್ರಹಣವು ರಾಶಿಗಳ ಮೇಲೆ ಬೀರುವ ಪರಿಣಾಮಗಳೇನು ಎನ್ನುವುದರ ಕುರಿತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಪವರ್ ಟಿವಿಗೆ ಮಾಹಿತಿ ನೀಡಿರುವ ಸ್ವಾಮೀಜಿ, ಭಾರತದಲ್ಲಿ ಅದೃಶ್ಯ ಗ್ರಹಣವಾಗಿದ್ದರೂ ಇದರ ಪ್ರಭಾವ ಭಾರತದ ಮೇಲೂ ಇದೆ ಎಂದು ಹೇಳಿದ್ದಾರೆ. ಮೇಷ, ವೃಷಭ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯವರಿಗೆ ಶಾಂತಿ ಅಗತ್ಯ ಇಲ್ಲವೇ ಕಂಟಕ ಎದುರಾಗಲಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ : ಯುಗಾದಿ ಭವಿಷ್ಯ : ಈ ರಾಶಿಗೆ ರಾಜಯೋಗ

ಏಪ್ರಿಲ್ 20, 2023ರಂದು ನಡೆಯುವ ಕಂಟಕ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವದಿಂದ ಜಾಗತಿಕವಾಗಿ ಅನೇಕ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತಲಿದೆ. ಮೇಷದಲ್ಲಿ ರಾಹು ಸ್ಥಿತನಾಗಿರುವುದರಿಂದ ಜಾಗತಿಕವಾಗಿ ಅನೇಕ ಗಾಳಿಯಲ್ಲಿ ಹರಡುವ ರೋಗಗಳು ಹೆಚ್ಚಾಗುತ್ತಾ ಹೋಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಹಣದ ದಿನದಂದುನಡೆಯಲಿರುವ ಶತ್ರುಸಂಹಾರ ಪ್ರತ್ಯಂಗಿರಾ ಯಾಗದಲ್ಲಿ ಸರ್ವರೂಭಾಗವಹಿಸಿ ಶ್ರೀಭಗವತಿಯ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES