Monday, December 23, 2024

ನಾಮಪತ್ರ ಸಲ್ಲಿಕೆಗೂ ಮುನ್ನ ದೇವರ ಆಶೀರ್ವಾದ ಪಡೆದ ರಾಮಚಂದ್ರಗೌಡ

ಬೆಂಗಳೂರು : ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಶ್ರೀ ರೇಣುಕಾ ಯಲ್ಲಮ್ಮ ದೇವಿ ಆಶೀರ್ವಾದ ಪಡೆದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸೀಕಲ್ ರಾಮಚಂದ್ರಗೌಡ ಅವರು ದಂಪತಿ (ಕುಟುಂಬ) ಸಮೇತರಾಗಿ ಹಲವು ಬಿಜೆಪಿ ಮುಖಂಡರೊಂದಿಗೆ ನಗರದ ರೇಣುಕಾ ಯಲ್ಲಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡ ಸೀಕಲ್ ಆನಂದ ಗೌಡ, ಪಕ್ಷದ ಪ್ರಮುಖರಾದ ವೆಂಕಟೇಶ್ ಗೌಡ, ನಂದೀಶ್, ಕೊತ್ತನೂರು ರವಿ, ಗೋಪಾಲಗೌಡ, ಚೆಲುವನಾರಾಯಣ, ಭರತ್, ಅಭಿ, ಪ್ರವೀಣ್, ನಗರಸಭಾ ಸದಸ್ಯ ನಾರಾಯಣಸ್ವಾಮಿ, ನಗರ ದೇವರಾಜ್, ಫ್ಲಕ್ಸ್ ದೇವರಾಜ್, ನರೇಶ್ ಮತ್ತಿತರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದರು.

ಇದನ್ನೂ ಓದಿ : ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಸೀಕಲ್ ರಾಮಚಂದ್ರ ಗೌಡ

ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ

ಇದೇ ವೇಳೆ ಮಾತನಾಡಿರುವ ಬಿಜೆಪಿ ಮುಖಂಡರು, ಸಿಕಲ್ ರಾಮಚಂದ್ರ ಗೌಡ ಅವರಿಂದ ಶಿಡ್ಲಘಟ್ಟದಲ್ಲಿ ಬಿಜೆಪಿಗೆ ಅಪಾರವಾದ ಅಭಿಮಾನ ಬಳಗ ಬಂದಿದೆ. ಬಿಜೆಪಿ ಈ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಹೈಕಮಾಂಡ್ ಮುಂದಿನ ಭವಿಷ್ಯಕ್ಕೆ ಒಳ್ಳೆಯ ಆಯ್ಕೆ ಮಾಡಿದ್ದು, ಯುವಕರಿಗೆ ಅವಕಾಶ ನಿಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಲವುರು ಬಿಜೆಪಿ ಸೇರ್ಪಡೆ

ಇನ್ನೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬೈಯಪ್ಪನ ಹಳ್ಳಿ, ಈ ತಿಮ್ಮಸಂದ್ರ ಮತ್ತು  ಸಾದಲಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ನಮನ ಕಾರ್ಯಕ್ರಮದಲ್ಲಿ ಅನ್ಯ ಪಕ್ಷದ ಹಲವು ನಾಯಕರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಸೀಕಲ್ ಆನಂದ್ ಗೌಡ, ಸುರೇಂದ್ರ ಗೌಡ, ಸೌಮ್ಯಾ ರೆಡ್ಡಿ ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಪರ್ವ ಮುಂದುವರಿದಿದೆ.

RELATED ARTICLES

Related Articles

TRENDING ARTICLES