ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬಿಡುಗಡೆಯಾಗಿರುವ ಬಿಜೆಪಿ ಮೂರನೇ ಪಟ್ಟಿಯಲ್ಲಿ ಮಹೇಶ ಟೆಂಗಿನಕಾಯಿ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಗಿಟ್ಟಿಸಿಕೊಂಡಿದ್ದು, ಈ ಕುರಿತು ಮೊದಲ ಪ್ರತಿಕ್ರಿಯೆ ನಿಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸೆಂಟ್ರಲ್ ನಲ್ಲಿ ಗಟ್ಟಿಮುಟ್ಟಾದ ಸಂಘಟನೆ ಹೊಂದಿದೆ. ರಾಜ್ಯಾಧ್ಯಕ್ಷರು, ಸಿಎಂ, ಕೇಂದ್ರ ಸಚಿವರು ತೀರ್ಮಾನಿಸಿ ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಒಬ್ಬ ಕಾರ್ಯಕರ್ತನಿಗೆ ಟಿಕೇಟ್ ಕೊಟ್ಟಿದೆ. ವರಿಷ್ಠರು ನೀಡಿರುವ ಅವಕಾಶವನ್ನು ನಾನು ಚಾಲೆಂಜ್ ಟಾಸ್ಕ್ ಆಗಿ ತಗೋತೀನಿ. ಚುನಾವಣೆಯಲ್ಲಿ ಗೆದ್ದು ಬರ್ತೀವಿ ಎಂದು ಮಹೇಶ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಲಿಂಗಾಯತ ನಾಯಕರಲ್ಲಿ ನಾನೇ ಹಿರಿಯ, ಅದಕ್ಕೆ ಹೊರ ಹಾಕಿದ್ರು : ಜಗದೀಶ್ ಶೆಟ್ಟರ್
ಶೆಟ್ಟರ್ ಜೊತೆ ಕೆಲಸ ಮಾಡಿದ್ದೇವೆ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆರು ಚುನಾವಣೆಗಳಲ್ಲಿಯೂ ನಾನೂ ಕೆಲಸ ಮಾಡಿದ್ದೇವೆ. ಕಾರ್ಯಕರ್ತರ ಮೇಲೆ ವಿಶ್ವಾಸವಿದೆ. ರಾಜಕಾರಣದಲ್ಲಿ ಏನು ಬೇಕಾದರೂ ನಡೆಯುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.
ಗುರುಗಳ ವಿರುದ್ಧ ಶಿಷ್ಯ ಗೆಲ್ಲಲು ಕಾರ್ಯಕರ್ತರೇ ತಂತ್ರ ರೂಪಿಸುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳನ್ನಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಖಂಡಿತಾ ಜಯಭೇರಿ ಬಾರಿಸುತ್ತೇನೆ ಎಂದು ತಿಳಿಸಿದ್ದಾರೆ.