Wednesday, January 22, 2025

ಕಾಂಗ್ರೆಸ್​​ನಲ್ಲಿ ಲಿಂಗಾಯತ ನಾಯಕರಿಗೆ ಭವಿಷ್ಯವಿಲ್ಲ ; ಸಚಿವ ಬಿ.ಸಿ.ಪಾಟೀಲ್​​

ಹಾವೇರಿ: ಕಾಂಗ್ರೆಸ್​​ನಲ್ಲಿ ಲಿಂಗಾಯತ ನಾಯಕರಿಗೆ ಭವಿಷ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ಹೇಳಿದ್ದಾರೆ.ಇನ್ನೂ
ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವವರಿಗೆ ಭವಿಷ್ಯವಿಲ್ಲ ಎಂದು ವಾಗ್ದಾಳಿ ನೆಡೆಸಿದ್ದಾರೆ.
 ಹೌದು,ಹಿರೇಕೆರೂರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ (BJP) ಜಗದೀಶ್‌ ಶೆಟ್ಟರ್ ರಾಜ್ಯದ ಉನ್ನತ ಸ್ಥಾನಗಳನ್ನು ಅನುಭವಿಸಿ ಇಂದು ಕಾಂಗ್ರೆಸ್ (Congress) ಸೇರ್ಪಡೆ ಆಗುತ್ತಿರುವುದು ನಿಜಕ್ಕೂ ಖಂಡನೀಯ. ಬಿಜೆಪಿ ಇಷ್ಟೆಲ್ಲ ಅನುಭವಿಸಿದ ನಂತರವೂ ಹೀನಾಯ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ ಅಂದರೆ ಬಹುಶಃ ಅವರಿಗೆ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ ಮಾಡುವ ಮಾತನ್ನು ಕಾಂಗ್ರೆಸ್‌ನವರು ಕೊಟ್ಟಿರಬಹುದು. ಅದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.
ಇನ್ನೂ ಸವದಿ, ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಖಂಡನೀಯ. ಸೋತಿದ್ರು ಸಹಿತ ಅವರನ್ನು ಡಿಸಿಎಂ ಮಾಡಿ ಎಂಎಲ್‌ಸಿ ಮಾಡಲಾಯಿತು. ಕುಮಟಳ್ಳಿ ಸೇರಿದಂತೆ 17 ಜನ ಪಕ್ಷ ಬಿಟ್ಟು ಬಂದಿದ್ದಕ್ಕೆ ಇವರು ಡಿಸಿಎಂ ಆಗಿದ್ದರು. ಇದನ್ನೆಲ್ಲಾ ಸವದಿಯವರು ತಿಳಿದುಕೊಂಡು ಪಕ್ಷದಲ್ಲಿ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES