Monday, December 23, 2024

Wow : ಆರ್​ಸಿಬಿ ಕಪ್ ಹಿಡಿದ ಅಮೂಲ್ಯ ಅವಳಿ ಮಕ್ಕಳು : ಇಲ್ಲಿವೆ ಕ್ಯೂಟ್ ಫೋಟೋಗಳು

ಬೆಂಗಳೂರು : ಆರ್​ಸಿಬಿ.. ಇದು ಕೇವಲ ಒಂದು ಕ್ರಿಕೆಟ್ ತಂಡವಲ್ಲ. ಇದು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಕೂಡ ಹೌದು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಏಕೈಕ ಐಪಿಎಲ್ ತಂಡ ನಮ್ಮ ಆರ್​ಸಿಬಿ.

ಲಕ್ಷಾಂತರ ಅಭಿಮಾನಿಗಳು ಆರ್​ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಾರೆ. ಅದೇ ರೀತಿ ನಟಿ ಅಮೂಲ್ಯ ಅವರು ಸಹ ತಮ್ಮ ಅವಳಿ ಮಕ್ಕಳ ಸ್ಪೆಷಲ್ ಫೋಟೋಶೂಟ್​ ಮಾಡಿಸಿ ಆರ್​ಸಿಬಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಕಿಂಗ್’ ಕೊಹ್ಲಿ ‘ದರ್ಬಾರ್ ‘ : ಹೊಸ ದಾಖಲೆ ನಿರ್ಮಾಣ

ಕನ್ನಡಿಗರಿಗೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದರೆ ಎಲ್ಲಿಲ್ಲದ ಪ್ರೀತಿ. ಐಪಿಎಲ್ ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿ ಅಭಿಮಾನಿಗಳ ಅಬ್ಬರ ಜೋರಾಗಿರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ. ಈ ಹಿನ್ನೆಲೆ ನಟಿ ಅಮೂಲ್ಯ, ತಮ್ಮ ಅವಳಿ ಮಕ್ಕಳಿಗೆ ಆರ್‌ಸಿಬಿ ಪರಿಕಲ್ಪನೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ಅಮೂಲ್ಯ ಅವರ ಅವಳಿ ಗಂಡು ಮಕ್ಕಳು ಆರ್​ಸಿಬಿ ಜರ್ಸಿ ಧರಿಸಿ, ಕಪ್ ಹಿಡಿದು ಪೋಸ್ ನೀಡಿದ್ದಾರೆ. ಅಮೂಲ್ಯ ಈ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಮನ ಸೆಳೆದಿದೆ.

ಈ ಸಲ ಕಪ್ ನಮ್ದೆ

ನಟಿ ಅಮೂಲ್ಯ ಅವರು ಸಹ ಆರ್​ಸಿಬಿ ಅಭಿಮಾನಿಯಾಗಿದ್ದಾರೆ. ಇದೇ ಕಾರಣದಿಂದ ತಮ್ಮ ಮಕ್ಕಳ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಸಲ ಕಪ್ ನಮ್ದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.

 

RELATED ARTICLES

Related Articles

TRENDING ARTICLES