Sunday, December 22, 2024

‘ತಿಮ್ಮಪ್ಪನ ದರ್ಶನ’ ಪಡೆದ ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಟೆಂಪಲ್ ರನ್ ಸಹ ಶುರು ಮಾಡಿದ್ದಾರೆ.

ಹೌದು, ನಾಮಪತ್ರ ಸಲ್ಲಿಕೆಗೂ ಮುನ್ನ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತನ್ನ ಹಾಗೂ ಬಿಜೆಪಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಟುಂಬ ಸಮೇತ ತಿಮ್ಮಪ್ಪನ ದರ್ಶನ ಮಾಡಿರುವ ರಾಮಚಂದ್ರಗೌಡ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಕ್ರಮೇಣ ಕೇಸರಿ ಮಯವಾಗುತ್ತಿದೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರ್ಪಡೆ ಆಗುತ್ತಿರುವುದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೇ 10ರ ವೇಳೆಗೆ ಬಿಜೆಪಿ 130 ಸ್ಥಾನ ದಾಟಲಿದೆ ; ಸಿಎಂ ಬಸವರಾಜ ಬೊಮ್ಮಾಯಿ

ರಾಮಚಂದ್ರಗೌಡರ ಗೆಲುವಿಗೆ ವಿಶೇಸ ಪೂಜೆ

ಇನ್ನೂ ಸೀಕಲ್ ಆನಂದಗೌಡ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಗಾಂಧಿ ನಗರದ ಮುನೇಶ್ವರ ದೇವಸ್ಥಾನ ಮತ್ತು ಮಾರುತಿನಗರದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಸೀಕಲ್ ರಾಮಚಂದ್ರ ಗೌಡರ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಅನೇಕ ಕಾರ್ಯಕರ್ತರು ಮತ್ತು ಬೆಂಬಲಿಗಳು ಹಾಜರಿದ್ದರು.

ಬಿಜೆಪಿ ಸೇರಿದ 30ಕ್ಕೂ ಹೆಚ್ಚು ಮಹಿಳೆಯರು

ಬಿಜೆಪಿ ಸಿದ್ಧಾಂತ ಹಾಗೂ ಸೀಕಲ್ ರಾಮಚಂದ್ರಗೌಡ ಅವರ ಗೆಲುವಿನ ದೃಷ್ಠಿಯಿಂದ ಅನೇಕರು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ. ಅದರಂತೆ, ಇಂದು ಭಕ್ತರಳ್ಳಿಯ ರೈತ ಸಂಘ ಮತ್ತು ಸ್ತ್ರೀ ಶಕ್ತಿ ಸಂಘದ 30ಕ್ಕೂ ಹೆಚ್ಚು ಮಹಿಳೆಯರು ಸ್ವಯಂ ಪ್ರೇರಿತರಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಿಡ್ಲಘಟ್ಟದ ಸೇವಾ ಸೌಧಕ್ಕೆ ಬಂದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ಮಮತಾ ಅವರ ನೇತೃತ್ವದಲ್ಲಿ ಸೀಕಲ್ ಆನಂದ ಗೌಡ, ತಾಲೂಕು ಮಂಡಲ ಅಧ್ಯಕ್ಷರಾದ ಸುರೇಂದ್ರ ಗೌಡ, ಮುನಿರಾಜು ಅವರ ಸಮ್ಮುಖದಲ್ಲಿ  ಚೈತ್ರ, ನರಸಮ್ಮ, ಸಾವಿತ್ರಮ್ಮ, ಮುನಿಯಲ್ಲಮ್ಮ, ಸರಳ, ವರಲಕ್ಷ್ಮಿ, ಆಶಾ, ಸರಸಮ್ಮ, ಸರಸ್ವತಮ್ಮ, ವಸಂತ, ಚೆನ್ನಮ್ಮ, ಬೇಬಿ, ಶಶಿ, ಶಿವರಾಜ್, ಮುತ್ತಮ್ಮ, ಮುನಿಲಕ್ಷ್ಮಮ್ಮ ಅವರು ಪಕ್ಷಕ್ಕೆ ಸೇರ್ಪಡೆಯಾದರು.

RELATED ARTICLES

Related Articles

TRENDING ARTICLES