Sunday, January 19, 2025

ಮೇ 10ರ ವೇಳೆಗೆ ಬಿಜೆಪಿ 130 ಸ್ಥಾನ ದಾಟಲಿದೆ ; ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ : ರಾಜ್ಯ ವಿಧಾನಸಭಾ ಚುಣಾವಣೆ ಗೆಲ್ಲಲು ಬಿಜೆಪಿಗೆ ಸದ್ಯದ ಪರಿಸ್ಥಿತಿಯಲ್ಲಿ 100 ಸ್ಥಾನಗಳನ್ನು ಗೆಲವು ವಿಶ್ವಾವವಿದೆ.ಈವರೆಗೆ ನಡೆದಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಜಯ ದೊರೆಯಲಿದೆ ಎಂದು ವರದಿಗಳು ತಿಳಿಸಿದ್ದು, ಮೇ 10 ನೇ ತಾರೀಖು ನಡೆಯುವ ಮತದಾನದಂದು 130 ಸ್ಥಾನಗಳಲ್ಲಿ ಬಿಜೆಪಿ ಮುಂದಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹೌದು, ಕಾಂಗ್ರೆಸ್ ನಿಂದ ಹಲವಾರು ಜನ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿವೆ. ನಮ್ಮ ಕೆಲಸ ಮಾತಾಡಬೇಕು. ನಮ್ಮ ಕೆಲಸ ನೋಡಿ ಜನ ಮತ ಕೊಡಬೇಕಿದೆ ಎಂದರು.

ಇದನ್ನೂ ಓದಿ: ಬಿಜೆಪಿಗೆ ಬಿಗ್ ಶಾಕ್ : ಜಗದೀಶ್ ಶೆಟ್ಟರ್ ರಾಜೀನಾಮೆ

ಜನರ ಆಶೀರ್ವಾದದಿಂದ ನಾಮಪತ್ರ ಸಲ್ಲಿಸಿದ್ದು, ಎಪ್ರಿಲ್ 19 ನೇ ತಾರೀಖು ಬೃಹತ್ ಸಂಖ್ಯೆಯಲ್ಲಿ ಸೇರಬೇಕು. ಅಂದು ನಿಮ್ಮೆಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಇನ್ನೂ ವಿರೋಧ ಪಕ್ಷದವರು ಮನ ಬಂದಂತೆ ಮಾತನಾಡುತ್ತಾರೆ. ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದರು. ಮಾಜಿ ಶಾಸಕ ಮಂಜುನಾಥ್ ಕುನ್ನೂರು ಅವರು 2000 ಇಸವಿಯಲ್ಲಿ ಮಂಜೂರು ಮಾಡಿದ್ದನ್ನು ಈಗ ತಿಳಿಸುತ್ತಾರೆ ಎಂದರು. ಕೆಲವರು ಹೊರಗಿನ ತಾಲೂಕಿನಿಂದ ಚುನಾವಣೆಗೆ ಬರುತ್ತಾರೆ. ಚುನಾವಣೆ ಆದ ಮೇಲೆ ಅವರು ಬರಲ್ಲ, ಕಷ್ಟ ಸುಖ ಕೇಳುವುದಿಲ್ಲ. ಹಾಲಿನಲ್ಲಿ ಉಪ್ಪು ಹಾಕೋಕೆ ಬರುತ್ತಾರೆ. ಇಂಥವರ ಮಾತು ಕೇಳಬೇಡಿ ಎಂದರು.

ಕಳೆದ ಬಾರಿ ಬಿಜೆಪಿಗೆ 104 ಸ್ಥಾನ ಬಂದಿತ್ತು. ಆದರೆ ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಯಾರ ಕಡೆ ಇದೆ ಎಂದು ತೋರಿಸಿದರು. ಬಳಿಕ ಒಂದು ಸುಭದ್ರ ಸರಕಾರ ರಚನೆ ಮಾಡಲಾಯಿತು ಎಂದರು.

 

RELATED ARTICLES

Related Articles

TRENDING ARTICLES