ಹಾವೇರಿ : ರಾಜ್ಯ ವಿಧಾನಸಭಾ ಚುನಾವಣೆಗೆ ಹಿರೇಕೆರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಕೃಷಿ ಸಚಿವ ಬಿ.ಸಿ. ಪಾಟೀಲ್ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಏಪ್ರಿಲ್ 18ರಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಶಕ್ತಿ ಪ್ರದರ್ಶನ ಸಾಬೀತು ಪಡಿಸಲು ವೇದಿಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಿರೇಕೆರೂರು ಗೃಹ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ.
ಈ ವೇಳೆ ಮಾತನಾಡಿರುವ ಬಿ.ಸಿ ಪಾಟೀಲ್, ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ನಾಯಕ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಅವರು ಭಾಗವಹಿಸಲಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸಿ, ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೇ 10ರ ವೇಳೆಗೆ ಬಿಜೆಪಿ 130 ಸ್ಥಾನ ದಾಟಲಿದೆ ; ಸಿಎಂ ಬಸವರಾಜ ಬೊಮ್ಮಾಯಿ
ಹಿರೇಕೆರೂರು ವಿಧಾನಸಭಾ ವ್ಯಾಪ್ತಿಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಏಪ್ರಿಲ್ 18 ರಂದು ಮಂಗಳವಾರ ನಾಮಪತ್ರ ಸಲ್ಲಿಸುತ್ತಿದ್ದು, ಅದರ ಪೂರ್ವಭಾವಿ ಸಭೆಯನ್ನು ಇಂದು ಹಿರೇಕೆರೂರು ಗೃಹ ಕಚೇರಿಯಲ್ಲಿ ನಡೆಸಿ, ಮಾತನಾಡಲಾಯಿತು
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶಿವಕುಮಾರ್ ತಿಪ್ಪಶೆಟ್ಟಿ, ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸಿ pic.twitter.com/8n3qUPd7GS
— Kourava B.C.Patil (@bcpatilkourava) April 16, 2023
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಶಿವಕುಮಾರ್ ತಿಪ್ಪಶೆಟ್ಟಿ, ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸಿ ವಿಸ್ತಾರಕರಾಗಿ ಆಗಮಿಸಿರುವ ಬಿಹಾರದ ಬಿಜೆಪಿ ವಕ್ತಾರ ಅಖಿಲೇಶ್ ಸಿಂಗ್, ವಿಧಾನಸಭಾ ಕ್ಷೇತ್ರದ ಪ್ರಭಾರಿಗ ರಾಜೇಂದ್ರ ಹಾವೇರಣ್ಣನವರ್, ವಿಸ್ತಾರಕ ನವೀನ್ ಪಾಟೀಲ್, ಸಾಂಬಾರು ಮಂಡಳಿ ಅಧ್ಯಕ್ಷ ಎನ್.ಎಂ ಇಟೇರ, ಮುಖಂಡರಾದ ದೊಡ್ಡಗೌಡ್ರು ಪಾಟೀಲ್, ಲಿಂಗರಾಜ್ ಚಪ್ಪರದಹಳ್ಳಿ, ಆನಂದಪ್ಪ ಹಾದಿಮನಿ, ಸೃಷ್ಟಿ ಪಾಟೀಲ್, ಗೀತಾ ದಂಡಗಿಹಳ್ಳಿ, ಮಂಜುಳಾ ಬಾಳಿಕಾಯಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ, ದೇವರಾಜ್ ನಾಗಣ್ಣನವರ್, ಮಹೇಶ್ ಮುತ್ತಳ್ಳಿ, ರವಿ ಭೋಗಾವಿ ಹಾಗೂ ಮುಖಂಡರುಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿರೇಕೆರೂರು ವಿಧಾನಸಭಾ ವ್ಯಾಪ್ತಿಯ ವೈದ್ಯರೊಂದಿಗೆ ನಿನ್ನೆ ಹಿರೇಕೆರೂರು ಗೃಹ ಕಚೇರಿಯಲ್ಲಿ ಸಭೆ ನಡೆಸಿ, ಪಕ್ಷದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನ ವೈದ್ಯರು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಾಲ್ಗೊಂಡಿದ್ದರು. pic.twitter.com/qfIHE5qD5q
— Kourava B.C.Patil (@bcpatilkourava) April 16, 2023
ಕ್ಷೇತ್ರದ ವೈದ್ಯರೊಂದಿಗೆ ಸಭೆ
ಇನ್ನೂ ನಿನ್ನೆ (ಶನಿವಾರ) ಹಿರೇಕೆರೂರು ವಿಧಾನಸಭಾ ವ್ಯಾಪ್ತಿಯ ವೈದ್ಯರೊಂದಿಗೆ ಸಚಿವ ಬಿ.ಸಿ ಪಾಟೀಲ್ ಗೃಹ ಕಚೇರಿಯಲ್ಲಿ ಸಭೆ ನಡೆಸಿ, ಪಕ್ಷದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.