Monday, December 23, 2024

ಲಿಂಗಾಯತರನ್ನು ಸಿಎಂ ಮಾಡಿದ್ದು ಬಿಜೆಪಿ : ಅರವಿಂದ ಬೆಲ್ಲದ

ಧಾರವಾಡ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ ಕುರಿತು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಾರಿ 67 ಜನ ಲಿಂಗಾಯತರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ನವರು ಜಗದೀಶ್ ಶೆಟ್ಟರ್ ಅವರನ್ನು ಬಳಕೆ ಮಾಡಿಕೊಂಡು ಹೇಗೆ ಕೈ ಬಿಡ್ತಾರೆ ಕಾದು ನೋಡಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಸೇರುವುದು ಆಘಾತ

ಇವತ್ತು ನಮಗೆ ನೂವಿನ ದಿನ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿ ಇದು. ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ಪಕ್ಷ ಬಿಟ್ಟಿದ್ದು ನೂವು ತಂದಿದೆ. ಬಿಜೆಪಿ ಪಕ್ಷ ಶೆಟ್ಟರ್ ಅವರಿಗೆ ಎಲ್ಲ ಸ್ಥಾನಮಾನವನ್ನು ಕೊಟ್ಟಿದೆ. ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ನಮಗೆ ಆಘಾತ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನವರು ‘ಬಿಜೆಪಿ ಅಭ್ಯರ್ಥಿಗಳ ಕೈ ಕಾಲು’ ಹಿಡಿಯುತ್ತಿದ್ದಾರೆ : ಗೋವಿಂದ ಕಾರಜೋಳ

ಮನಸ್ಸು ಮಾಡಿ ಮತ್ತೆ ಬಿಜೆಪಿಗೆ ಬರಲಿ

ಜಗದೀಶ್ ಶೆಟ್ಟರ್ ಅವರು ಈಗಲೂ ಮನಸ್ಸು ಮಾಡಿ ಮತ್ತೆ ಬಿಜೆಪಿ ಪಕ್ಷಕ್ಕೆ ಬರಲಿ. ಅವರು ಪಕ್ಷ ಬಿಟ್ಟಿದ್ದು ಡ್ಯಾಮೇಜ್ ಆಗಲ್ಲ. ಪಕ್ಷ ಈಗಾಗಲೆ ಬೆಳೆದಿದೆ. ಪ್ರಧಾನಿ ನರೇಂದ್ರ ಮೋದಿ‌ ಅವರ ಕಾರ್ಯ ವೈಖರಿಯನ್ನು ದೇಶ ನೋಡುತ್ತಿದೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ರೆ ಏನು ಫರಕ್ ಬಿಳಲ್ಲ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಗೆ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿ ವ್ಯಕ್ತಿ ನಿಷ್ಠ ಪಕ್ಷ ಅಲ್ಲ. ಇದು ತತ್ವಸಿದ್ದಾಂತಗಳನ್ನು ಹೊಂದಿದ ಪಕ್ಷ. ರಾಷ್ಟ್ರದ ನಾಯಕತ್ವಕ್ಕೆ ‌ಬನ್ನಿ ಅಂದರೆ ಅವರು ಬರಲ್ಲ ಅಂದ್ರು. ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷ ಬಿಟ್ರೆ ಪಕ್ಷಕ್ಕೇನು ಹಾನಿಯಾಗಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

RELATED ARTICLES

Related Articles

TRENDING ARTICLES