Monday, December 23, 2024

ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಸೀಕಲ್ ರಾಮಚಂದ್ರ ಗೌಡ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿರುವ ಸೀಕಲ್ ರಾಮಚಂದ್ರ ಗೌಡ ಕ್ಷೇತ್ರದಲ್ಲಿ ಮತ ಬೇಟೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಒಕ್ಕಲಿಗ ಪೀಠದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಕುಟುಂಬ ಸಮೇತವಾಗಿ ಭೇಟಿಯಾಗಿ ಸೀಕಲ್ ರಾಮಚಂದ್ರ ಗೌಡ ಅವರು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸ್ವಾಮೀಜಿಗಳ ಬಳಿ ರಾಜಕೀಯ ಬೆಳವಣಿಗೆ ಹಾಗೂ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇನ್ನೂ ರಾಮಚಂದ್ರಗೌಡ ಅವರಿಗೆ ಶಿಡ್ಲಘಟ್ಟ ಬಿಜೆಪಿ ಟಿಕೆಟ್ ಘೋಷಿಸಿದ ಬಳಿಕ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಹೊಸ ಹುರುಪು ಬಂದಿದೆ. ಈ ಬಾರಿ ಬಿಜೆಪಿ ಪಕ್ಷದ್ದೇ ಗೆಲುವು ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ರಾಮಚಂದ್ರಗೌಡರಿಗೆ ಬಿಜೆಪಿ ಟಿಕೆಟ್ : ವರಿಷ್ಠರ ‘ವಿಶ್ವಾಸ ಉಳಿಸಿಕೊಳ್ಳುವೆ’ ಎಂದು ರಾಮಚಂದ್ರಗೌಡ ವಿಶ್ವಾಸ

ಕಮಲ ಅರಳಿಸುವ ಸಂಕಲ್ಪ

ಪಕ್ಷದ ಯುವಕರ ತಂಡ ‘ನಮ್ಮ ನಡೆ ಮತದಾರರ ಮನೆಗಳ ಕಡೆ’ ಕಾರ್ಯಕ್ರಮದ ಮೂಲಕ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಪರವಾಗಿ ಮತ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಶಿಡ್ಲಘಟ್ಟದಲ್ಲಿ ನಮ್ಮ ಗುರಿ, ನಮ್ಮ ಊರಿನ ಕಮಲವನ್ನು ಅರಳಿಸಬೇಕು ಎಂಬ ಘೋಷ ವಾಕ್ಯದೊಂದಿಗೆ ಮತ ಬೇಟೆ ನಡೆಸುತ್ತಿದ್ದಾರೆ.

ಬಿಜೆಪಿ ಸೇರಿದ ಜೆಡಿಎಸ್ ನಾಯಕರು

ಕೆಂಚರ್ಲಹಳ್ಳಿ ಗ್ರಾಮ ಪಂಚಾಯಿತಿ ಮುಖಂಡರಾದ ವೆಂಕಟರಮಣಪ್ಪ ಅವರು ಇಂದು ಸೀಕಲ್ ಆನಂದಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಗ್ರಾಮದ ಗಣೇಶ್, ಆಂಜನೇಯ ರೆಡ್ಡಿ, ರಾಮಚಂದ್ರ, ಬೈರೆಡ್ಡಿ, ನಾರಾಯಣಸ್ವಾಮಿ ಅವರು ಅವರ ಜೊತೆ ಸೇರ್ಪಡೆಗೊಂಡರು. ತಾಲೂಕು ಮಂಡಲದ ಅಧ್ಯಕ್ಷರಾದ ಸುರೇಂದ್ರ ಗೌಡರು ಇದ್ದರು.

RELATED ARTICLES

Related Articles

TRENDING ARTICLES