ಬೆಂಗಳೂರು : ಚುನಾವಣೆ ಹತ್ತಿರ ಆದ್ದಂತೆ ರಾಜ್ಯ ರಾಜಕರಣದಲ್ಲಿ ಪಕ್ಷಂತರ ಭೀತಿ ಎಲ್ಲೆಡೆ ಹಬ್ಬುತ್ತಿದೆ. ಹೌದು, ಬಿಜೆಪಿ ಟಿಕೆಟ್ ತನ್ನ ಮೊದಲನೇ ಪಟ್ಟಿ ಬಿಡುಗೆಡ ಮಾಡುತ್ತಿದಂತೆ ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು ಬಂಡಾಯ ಎದ್ದು, ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ.
ಹೌದು, ಬಿಜೆಪಿ ಬಂಡಾಯ ನಾಯಕರನ್ನು ತನ್ನತ್ತ ಸೇಳೆಯಲು ಕಾಂಗ್ರೆಸ್ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಸವದಿ ಬಳಿಕ ಮತ್ತೊಬ್ಬ ಕೇಸರಿ ಕಲಿಗಳಿಗೆ ಬಲೆ ಹಾಕಿರುವ ಕಾಂಗ್ರೆಸ್ ನಾಯಕರು ತೆರೆಮರೆ ಹಿಂದೆ ಸರ್ಕಸ್ ನಡೆಸಿ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ಇನ್ನೂ ನನ್ನೆಯಷ್ಟೇ ಲಕ್ಷ್ಮಣ ಸವದಿ ‘ಕೈ’ ಗೆ ಸೇರ್ಪಡೆಯಾಗಿದ್ದು,ಈಗ ಜಗದೀಶ್ ಶೆಟ್ಟರ್ನ್ನ ತನ್ನ ಕಡೆ ಸಳೆಯುತ್ತಿದ್ದೀಯಾ..? ಎಂಬ ಅನುಮಾನ ಕೇಳಿ ಬಂದಿದೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ (Hubli-Dharwad Central Constituency) ಇನ್ನೂ ಟಿಕೆಟ್ ಘೋಷಣೆ ಮಾಡದಿರುವುದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಇಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ
ಜಗದೀಶ್ ಶೆಟ್ಟರ್ಗೆ ಹೈಕಮಾಂಡ್ ಚುನಾವಣಾ ನಿವೃತ್ತಿಗೆ ಸೂಚಿಸಿದ್ದಕ್ಕೆ ಕಾರಣ ಬೊಮ್ಮಾಯಿ ನಡುವೆ ರಾಜಕೀಯ ದ್ವೇಷವೇ ನನಗೆ ಟಿಕೆಟ್ ಕೈ ತಪ್ಪಲು ಕಾರಣವಾಗಿರಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಅಸಮಾಧಾನಕೊಂಡಿದ್ದ ಶೆಟ್ಟರ್ನ್ನ ಸಮಾಧಾನ ಪಡಿಸಿಲು ಬಿಜೆಪಿ ರಾಷ್ಟ್ರೀಯ ವರಿಷ್ಟರು ಕಸರತ್ತು ನಡೆಸಿದ್ದರು, ಅಂದ್ರೆ ಅದು ಯಾವುದೇ ಪ್ರಭಾವ ಬೀರಲಿಲ್ಲ ಇದನ್ನೇ ಬಳಸಿಕೊಂಡ ಡಿ.ಕೆ.ಶಿವಕುಮಾರ್ ವಿನಯ್ ಕುಲಕರ್ಣಿ ಮೂಲಕಜಗದೀಶ್ ಶೆಟ್ಟರ್ನ್ನ ಸಂಪರ್ಕಮಾಡಿ ಲಿಂಗಾಯಿತ ಮತಗಳನ್ನ ತನ್ನ ಕಡೆ ಸಳೆಯಲು ಪ್ರಯತ್ನ ಮಾಡುತ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ಬೆಂಬಲಿಗರ ಸಭೆ ಕರೆದಿರುವ ಜಗದೀಶ್ ಶೆಟ್ಟರ್ ಕಾಜಕೀಯ ನಡೆ ಯಾವ ಕಡೆ ಎಂಬುವುದನ್ನು ಕಾದುನೋಡಬೇಕಿದೆ.