Sunday, January 19, 2025

‘ಯಡಿಯೂರಪ್ಪನವರ ಆಶೀರ್ವಾದ’ದಿಂದ ಸಿಎಂ ಆದೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ವರಿಷ್ಠರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿ ಸುದ್ದಿಗಾರರೊಮದಿಗೆ ಮಾತನಾಡಿರುವ ಅವರು, ನಾನೆಂದು ಬಯಸಿರಲಿಲ್ಲ, ಆದ್ರೆ ಆ ಭಾಗ್ಯ ನನ್ನದಾಯಿತು. ಮೊದಲ ದಿನದಿಂದ ನಾನು ಪ್ರತಿನಿತ್ಯ 16 ಗಂಟೆ ಕೇಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ದೊಡ್ಡ ಪ್ರಮಾಣದ ಸಹಾಯ ಈ ಕ್ಷೇತ್ರಕ್ಕೆ ಆಗಿದೆ. ಕ್ಚೇತ್ರದ ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಒದಗಿಸಿದ್ದೇನೆ. ಬಾಡಾದಲ್ಲಿ ಅರಮನೆ ಕಟ್ಟಿ ಅಭಿವೃದ್ಧಿ ಮಾಡಿದ್ದೇನೆ. ಶಿಶುನಾಳದಲ್ಲಿ ಅಭಿವೃದ್ದಿಯಾಗುತ್ತಿದೆ. ನಾವು ಮಾತಬಾಡಬಾರದು, ನಮ್ಮ ಕೇಲಸಗಳು ಮಾತನಾಡಬೇಕು. ನಮ್ಮ‌ಅಭಿವೃದ್ದಿ ನೋಡಿ ಮತ ಕೊಡಬೇಕಿದೆ. ಕಾಂಗ್ರೆಸ್ ನವರಿಗೆ ಗೊತ್ತಾಗಿದೆ. ರಾಜ್ಯ ಸುತ್ತುವ ಜವಾಬ್ದಾರಿ ಇದೆ. ತಾವೇ ಬೊಮ್ಮಾಯಿ ಎಂದು ತಿಳಿದು ಕ್ಷೇತ್ರದ ಜನರ ಮನವನ್ನು ಒಲಿಸಿಬೇಕು ಎಂದಿದ್ದಾರೆ.

ಇದನ್ನೂ ಓದಿ : ಇವರೇ CM ರೇಸ್ ನಲ್ಲಿರುವ ‘ಕೈ’ ನಾಯಕರು : ಲೀಸ್ಟ್ ನಲ್ಲಿ ಖರ್ಗೆ, ಸಿದ್ದು ಫಸ್ಟ್

ಹಾಲಿನಲ್ಲಿ ಉಪ್ಪು ಹಾಕಲು ಬರ್ತಾರೆ

ವಿರೋದ ಪಕ್ಷಗಳು ಟೀಕೆ ಮಾಡುತ್ತವೆ. ಮನ ಬಂದಂತೆ ಮಾತನಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಏನೇ ಕೆಲಸ ಆಗಬೇಕು ಅಂದ್ರೆ ಬೊಮ್ಮಾಯಿಯವರ ಹತ್ತಿರ ಹೋಗಬೇಕು. ಜಗಳ ಮಾಡಬೇಕು. ಎಲ್ಲಾ ಸಮುದಾಯಗಳ ಆಶೀರ್ವಾದ ವಿಶ್ವಾಸ ಗಳಿಸಿಕೊಂಡು ಮುಂದೆ ಹೋಗುತ್ತಿದ್ದೇನೆ. ಈ‌ ಬಾರಿಯ ಚುನಾವಣೆ ನಿಮ್ಮ ಜವಾಬ್ದಾರಿ. ಹಗಲಿರುಳು ಕೇಲಸ ಮಾಡಬೇಕು. ಹೊರಗಿನವರು ರಾಜಕಾರಣ ಮಾಡಲು ಬರುತ್ತಾರೆ. ಹಾಲಿನಲ್ಲಿ ಉಪ್ಪು ಹಾಕಲು ಇಲ್ಲಿಗೆ ಬರುತ್ತಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

.19ರಂದು ಮತ್ತೆ ನಾಮಪತ್ರ ಸಲ್ಲಿಕೆ

ನಿಮ್ಮೆಲ್ಲರ ಆಶೀರ್ವಾದದಿಂದ ನಾನು ನಾಮಪತ್ರ‌ ಸಲ್ಲಿಸಿದ್ದೇನೆ. ಏಪ್ರಿಲ್ 19ಕ್ಕೆ ಜನತೆಯ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಳೆದ ಬಾರಿ ಆಯ್ಕೆಯಾದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು. ಬಳಿಕ ಅಪವಿತ್ರ ಮೈತ್ರಿ ಬಿದ್ದೋಯ್ತು. ಹಲವಾರು ಜನರು ನಮ್ಮ ಸರಕಾರ ಸೇರಿಕೊಂಡರು. ಕೋವಿಡ್ ಮಹಾಮಾರಿ ದೊಡ್ಡ ಆತಂಕವನ್ನೇ ಸೃಷ್ಟಿ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಅನ್ನು ಸಂಪೂರ್ಣ ವಾಗಿ ಎದುರಿಸಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES