ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆಸ್ತಿ ಘೋಷಿಸಿಕೊಂಡಿದ್ದು, 49.70 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.
5.98 ಕೋಟಿ ರೂ. (ಅವಿಭಕ್ತ ಕುಟುಂಬದಿಂದ 1.57 ಕೋಟಿ ರೂ.) ಚರಾಸ್ತಿ, 42.15 ಕೋಟಿ ರೂ (ಅವಿಭಕ್ತ ಕುಟುಂಬದಿಂದ 19.2 ಕೋಟಿ ರೂ.) ಸ್ಥಿರಾಸ್ತಿ ಹೊಂದಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಬಳಿ 3 ಎಕರೆ ಜಮೀನು ಖರೀದಿಸಿದ್ದು, 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಇದೆ. 5.79 ಕೋಟಿ ರೂ. ಸಾಲ ಮಾಡಿದ್ದು, ಪುತ್ರನಿಗೆ 14.74 ಲಕ್ಷ ರೂ, ಪುತ್ರಿಗೆ 2 ಲಕ್ಷ ರೂ. ಸಾಲ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಆಸ್ತಿವಿವರ
- 3 ಲಕ್ಷ ನಗದು ಹಣ
- ಪತ್ನಿ ಚೇನ್ನಮ್ಮ ಹೆಸರಿನಲ್ಲಿ 50 ಸಾವಿರ
- ಅದಿತಿ ಬೊಮ್ಮಾಯಿ ಹೆಸರಲ್ಲಿ 25 ಸಾವಿರ
- ಬೊಮ್ಮಾಯಿ ಹೆಸರಿನಲ್ಲಿ ಫಿಕ್ಸ್ ಡೆಪಾಸಿಟ್ 6.83 ಲಕ್ಷ ರೂ.
- ಎಸ್ ಬಿ ಅಕೌಂಟ್ ನಲ್ಲಿ 33.80 ಲಕ್ಷ ರೂ.
ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ
- ಪಬ್ಲಿಕ್ ಲಿಮಿಟೆಡ್ ಇನ್ವೆಸ್ಟ್ ನಲ್ಲಿ ಹೂಡಿಕೆ 64.77 ಲಕ್ಷ ರೂ.
- ಪ್ರವೈಟ್ ಲಿಮಿಟೆಡ್ ಕಂಪನಿ ಯಲ್ಲಿ ಹೂಡಿಕೆ 64.98 ಲಕ್ಷ ರೂ.
- ಪಾಲುದಾರಿಕೆಯಲ್ಲಿ ಹೂಡಿಕೆ 1 ಕೋಟಿ 44 ಲಕ್ಷದ 36 ಸಾವಿರದ 914 ರೂ.
- ಮ್ಯುಚೂವಲ್ ಫಂಡ್ ಲ್ಲಿ 10 ಸಾವಿರ ರೂ.
- ಇತರೆ ಹೂಡಿಕೆ 39. ಲಕ್ಷ ರೂ.
- ಬಂಗಾರ-1 ಕೋಟಿ 50 ಲಕ್ಷದ 63 ಸಾವಿರದ 400 ರೂ.
- ಒಟ್ಟು ಆಸ್ತಿ ಮೌಲ್ಯ 5 ಕೋಟಿ 98 ಲಕ್ಷ 8 ಸಾವಿರದ 608 ರೂ.
- ಪತ್ನಿ ಚೆನ್ನಮ್ಮ ಹೆಸರಿನಲ್ಲಿ 1 ಕೋಟಿ 14 ಲಕ್ಷ 11ಸಾವಿರದ 600 ರೂ.
- ಮಗಳು ಅದಿತಿ ಹೆಸರಲ್ಲಿ 1 ಕೋಟಿ 28 ಲಕ್ಷ 9 ಸಾವಿರದ 824 ರೂ.
- ಆಸ್ತಿ 22 ಕೋಟಿ 95ಲಕ್ಷ 85 ಸಾವಿರದ 609 ರೂ.