ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆದೇಶದಂತೆ ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ವೈಎಸ್ವಿ ದತ್ತಾ ಅವರ ಪಾಲಾಗಿದೆ.
ನಿನ್ನೆ ಮಾಜಿ ಸಚಿವ ಎಚ್.ಡಿ ರೇವಣ್ಣ, ಕಡೂರಿನಿಂದ ವೈ.ಎಸ್.ವಿ ದತ್ತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದರು. ಇಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರೂ ಸಹ ಅಧಿಕೃತವಾಗಿ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದತ್ತ ಎಂದು ಘೋಷಿಸಿದ್ದಾರೆ.
ದತ್ತಾ ಆಗಮನದಿಂದ ಕಡೂರು ಆಕಾಂಕ್ಷಿ ಧನಂಜಯ್ ಅವರಿಗೆ ಟಿಕೆಟ್ ಕೈತಪ್ಪಿದೆ. ಇನ್ನು ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿ ಧನಂಜಯ್, ವೈ.ಎಸ್.ವಿ ದತ್ತಾ ವಿರುದ್ಧ ಕಿಡಿಕಾರಿದ್ದಾರೆ. ದತ್ತಾ ಕ್ಷೇತ್ರದ ಕಾರ್ಯಕರ್ತರಿಗೆ ಹಾಗೂ ಜನತೆಯ ಬಳಿ ಕ್ಷಮೆ ಕೋರಬೇಕು ಎಂದು ಧನಂಜಯ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ‘ಕಾಂಗ್ರೆಸ್ ಗೆ ಸೇರಿದ್ದು ತಪ್ಪಾಯ್ತು’ ಎಂದು ಬೇಸರ
ಏ.18ರಂದು ದತ್ತಾ ನಾಮಪತ್ರ
ಏಪ್ರಿಲ್ 18ನೇ ತಾರೀಖು ವೈಎಸ್ ವಿ ದತ್ತಾ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ಎಷ್ಟೇ ಕಷ್ಟ ಆದರೂ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಬರುತ್ತಾರೆ. ಬಂದೇ ಬರುತ್ತಾರೆ. ದತ್ತಾ ಅವರು ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ ಹೇಳಿದ್ದಾರೆ.
49 ಕ್ಷೇತ್ರಗಳ ಟಿಕೆಟ್ ಘೋಷಣೆ
ಅಳೆದು ತೂಗಿ ಜೆಡಿಎಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 49 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳನ್ನು ಎಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಅದರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಮಾಜಿ ಸಚಿವ ರೇವಣ್ಣ, ಹಾನಗಲ್ ಕ್ಷೇತ್ರದಲ್ಲಿ ಮನೋಹರ್ ತಹಶೀಲ್ದಾರ್, ಕಡೂರು ಕ್ಷೇತ್ರದಲ್ಲಿ ವೈಎಸ್ವಿ ದತ್ತಾಗೆ, ಸವದತ್ತಿ ಕ್ಷೇತ್ರದಲ್ಲಿ ಸೌರಭ್ ಆನಂದ್ ಚೋಪ್ರಾ, ಹಳಿಯಾಳ ಕ್ಷೇತ್ರದಲ್ಲಿ ಎಸ್.ಎಸ್.ಘೋಟ್ನೇಕರ್, ಜೇವರ್ಗಿ ಕ್ಷೇತ್ರದಲ್ಲಿ ದೊಡ್ಡಪ್ಪಗೌಡ ಪಾಟೀಲ್ಗೆ ಟಿಕೆಟ್ ಘೋಷಣೆಯಾಗಿದೆ.