Monday, January 27, 2025

ಕುಮಾರಣ್ಣನ ಸರ್ಕಾರ ಬಂದ್ರೆ ‘ರೈತರ ಸಂಕಷ್ಟ’ಗಳು ದೂರವಾಗಲಿದೆ : ಸಮೃದ್ಧಿ ಮಂಜುನಾಥ್

ಬೆಂಗಳೂರು : ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್​ ಚುನಾವಣಾ ಪ್ರಚಾರ ಮುಂದುವರೆದಿದೆ. ಸಮೃದ್ದಿ ಮಂಜುನಾಥ್ ಮತಯಾಚನೆಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಶುಕ್ರವಾರ ರಾಜೇಂದ್ರಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮೃದ್ದಿ ಮಂಜುನಾಥ್​ ಮತ ಯಾಚನೆ ಮಾಡಿದರು. ಈ ವೇಳೆ ಗ್ರಾಮದ ಜನರು ಹಾಗೂ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಅವರನ್ನು ಬರಮಾಡಿಕೊಂಡಿದ್ದಾರೆ. ಯುವಕರು ಸಹ ಸಮೃದ್ಧಿ ಮಂಜುನಾಥ್ ಗೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ.

ಕುಮಾರಣ್ಣ ನೇತೃತ್ವದ ಸರ್ಕಾರ ಪಕ್ಕಾ

ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಮಂಜುನಾಥ್ ಅವರು, ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ನಿವಾರಿಸಲು ಯೋಜನೆ ರೂಪಿಸುವುದಾಗಿ ​ಭರವಸೆ ಕೊಟ್ಟರು.

ಇದನ್ನೂ ಓದಿ : ಇಂದೇ ಬಿಡುಗಡೆಯಾಗಲಿದೆ ಜೆಡಿಎಸ್‌ 2ನೇ ಪಟ್ಟಿ

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಆ ಮೂಲಕ ರೈತರ ಸಂಕಷ್ಟಗಳು ದೂರವಾಗಲಿದೆ ಎಂದು ಸಮೃದ್ಧಿ ಮಂಜುನಾಥ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪ್ರಚಾರದಲ್ಲಿ ರಾಜೇಂದ್ರಹಳ್ಳಿ ಪಂಚಾಯಿತಿ ಜೆಡಿಎಸ್ ಸದಸ್ಯರು, ಬ್ಲಾಕ್ ಮುಖಂಡರು, ಪ್ರಮುಖ ನಾಯಕರು ಹಾಗೂ ಸಮೃದ್ಧಿ ಮಂಜುನಾಥ್ ಅವರ ಬೆಂಬಲಿಗರು, ಅಭಿಮಾನಿಗಳು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES