Wednesday, January 22, 2025

ಇಂದೇ ಬಿಡುಗಡೆಯಾಗಲಿದೆ ಜೆಡಿಎಸ್‌ 2ನೇ ಪಟ್ಟಿ

ಬೆಂಗಳೂರು : ಅಂತೂ, ಇಂತು ಹಾಸನ ಟಿಕೆಟ್ ಗೊಂದಲ ಫೈನಲ್ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ JDS ಕಚೇರಿಯಲ್ಲಿ ಪಟ್ಟಿ ಬಿಡುಗಡೆಯಾಗಲಿದ್ದು ಹಾಸನ ಟಿಕೆಟ್ ಭವಾನಿಗೋ ಅಥವಾ ಕಾರ್ಯಕರ್ತನಿಗೋ ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಎಲ್ರೂ ‘ಶಿವಕುಮಾರೂ ಸಾಕು, ಕಾಂಗ್ರೆಸ್ಸೂ ಸಾಕು’ ಅಂತಿದ್ದಾರೆ : ಅಶ್ವತ್ಥನಾರಾಯಣ ಟಾಂಗ್

ಹೌದು, ಇದೇ ಮೊದಲ ಬಾರಿಗೆ ದೇವೇಗೌಡರ ಕುಟುಂಬದಲ್ಲಿ ಟಿಕೆಟ್ ಫೈಟ್ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಅಖಾಡಕ್ಕೆ ಇಳಿದ್ರೂ ಹಾಸನ ಟಿಕೆಟ್ ಗೊಂದಲ ಇತ್ಯರ್ಥವಾಗಿಲ್ಲ. ರೇವಣ್ಣ ಹಾಗೂ ಕುಮಾರಸ್ವಾಮಿ ತಮ್ಮ ಪಟ್ಟು ಬಿಟ್ಟಿಲ್ಲ.

ಜೆಡಿಎಸ್‌ 2ನೇ ಪಟ್ಟಿ ರಿಲೀಸ್ 

ಇನ್ನೂ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಕಲಬುರ್ಗಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.  ಇಂದು, ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದಿದ್ದು, ಎಲ್ಲರ ಚಿತ್ತ ಹಾಸನ ಜೆಡಿಎಸ್ ಟಿಕೆಟ್ ನತ್ತ ನೆಟ್ಟಿದೆ.

2ನೇ ಪಟ್ಟಿಯಲ್ಲಿ 40-50 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದ ಇನ್ನೂ ಗೊಂದಲವಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು 2ನೇ ಪಟ್ಟಿಯಲ್ಲಿ ಬಿಡುಗಡೆ ಮಾಡುತ್ತರೋ ಇಲ್ವೋ‌.. ಕಾದುನೋಡಬೇಕಿದೆ

RELATED ARTICLES

Related Articles

TRENDING ARTICLES