Sunday, November 3, 2024

ಕನಕಪುರದಲ್ಲಿ 100% ಡಿಕೆಶಿ ಕಟ್ಟಿ ಹಾಕುತ್ತೇವೆ : ಅಶ್ವತ್ಥನಾರಾಯಣ

ಬೆಂಗಳೂರು : ಕನಕಪುರದಲ್ಲಿ ಸಚಿವ ಆರ್. ಅಶೋಕ್ ಸ್ಪರ್ಧೆ ವಿಚಾರವಾಗಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದು, ಕನಕಪುರದಲ್ಲಿ ಡಿಕೆಶಿ ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಪೊಲಿಟಿಕಲ್ ಸ್ಟ್ರಾಟರ್ಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ಕೆಲಸ ಕನಕಪುರದಲ್ಲಿ ಆಗುತ್ತದೆ. ಹೀಗಾಗಿ ಬಿಜೆಪಿ ಸಚಿವ ಆರ್. ಅಶೋಕ್​ರನ್ನು ಕಣಕ್ಕೆ ಇಳಿಸಿದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದಲ್ಲಿ ಕುಳಿತು ಸುಳ್ಳು ಆರೋಪಗಳನ್ನು ಮಾಡ್ತಾರೆ‌. ನಾವು ಯಾವುದೇ ಗ್ಯಾರಂಟಿಗಳನ್ನು ಕೊಡ್ತಿಲ್ಲ. ಅಭಿವೃದ್ಧಿ ಮಾಡಿ ತೋರಿಸಿದ್ದೇವೆ. ಅದರ ಮೇಲೆ ಮತ ಕೇಳ್ತೇವೆ. ನಾಳೆ ಕನಕಪುರದಲ್ಲಿ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸಚಿವ ಆರ್​​.ಅಶೋಕ್​ ಇದೇ ಏಪ್ರಿಲ್ 18ರಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ಎರಡು ಕ್ಷೇತ್ರದಲ್ಲಿ ಆರ್. ಅಶೋಕ್ ಗೆಲ್ತಾರೆ ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ

ಬಿಜೆಪಿ ನಾಯಕರ ರಾಜೀನಾಮೆ ಪರ್ವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಆಕಾಂಕ್ಷಿಗಳು ಜಾಸ್ತಿ ಆದಾಗ ಅಸಮಾಧಾನ ಇರುತ್ತದೆ. ಕಳೆದ‌ ಡಿಸೆಂಬರ್ ನಿಂದ ಕಾಂಗ್ರೆಸ್ ಅವರು ಪಟ್ಟಿ ಬಿಡುಗಡೆ ಮಾಡ್ತಾನೆ ಇದ್ದಾರೆ. ಆದರೆ, ನಾವು ಆ ರೀತಿ ಅಲ್ಲ ಒಂದೇ ಹಂತದಲ್ಲಿ 189 ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ವಿರೂಪಾಕ್ಷಪ್ಪಗೆ ಟಿಕೆಟ್ ಕೊಡಬೇಕಾ?

ಟಿಕೆಟ್ ಘೋಷಣೆ ಆದ ದಿನಗಳ ನಂತರ ಅಸಮಾಧಾನ ಕಡಿಮೆ ಆಗಿದೆ. ಜಗದೀಶ್ ಶೆಟ್ಟರ್ ‌ಅವರ ಅಸಮಾಧಾನ ಇವಾಗ ಇಲ್ಲ. ನಿಮಗೂ ಕೂಡ ಕೆಲವೊಂದು ಅಭ್ಯರ್ಥಿಗಳ ಬಗ್ಗೆ ಮಾಹತಿ ಇದೆ. ನೆಹರೂ ಓಲೆಕಾರ್, ಮಾಡಾಳ್ ವಿರೂಪಾಕ್ಷಪ್ಪ ಇವರಿಗೆ ಟಿಕೆಟ್ ಕೊಡಬೇಕಾ? ಅವರ ಮೇಲೆ ಭ್ರಷ್ಟಾಚಾರದ ಆರೋಪ‌ ಇದೆ. ಅಸಮಾಧಾನ ಆಗಿದೆ ಅಂದ ತಕ್ಷಣ ಅವರ ತಪ್ಪುಗಳನ್ನು ಪಾರ್ಟಿ ಒಪ್ಪುಕೊಳ್ಳಬೇಕಾ? ಇದೆಲ್ಲವನ್ನೂ ಭಿನ್ನಮತ ಎಂದು ಹೇಳೊಕೆ ಆಗಲ್ಲ ಎಂದು ತಿಳಿಸಿದ್ದಾರೆ.

ಕೆಲವೊಂದು ಮಾನದಂಡಗಳನ್ನು ನೋಡಿ ಪಕ್ಷ ಟಿಕೆಟ್ ನೀಡಿದೆ. ಪುತ್ತೂರಿನಲ್ಲಿ ಭಾಗೀರಥಿ ಎಂಬುವವರಿಗೆ ಟಿಕೆಟ್ ನೀಡಿದೆ. ಅವರ ಮನೆಗೆ ಹೋದರೆ ಒಂದು ಕಪ್ ಟೀ ಕೂಡ ಕೊಡೊದಕ್ಕೂ ಅವರ ಕೈಲಿ ಆಗಲ್ಲ. ಅಂತವರಿಗೆ ಕೂಡ ಪಕ್ಷ ಟಿಕೆಟ್ ನೀಡಿದೆ. ಕಳೆದ ಕೆಲ‌‌ ದಿನಗಳ ಹಿಂದೆ ಇದ್ದಂತಹ ಅಸಮಾಧಾನ ಇದೀಗ ಕಡಿಮೆ ಆಗಿದೆ ಎಂದು ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES