Monday, December 23, 2024

‘ದೇವೆಗೌಡ್ರು ಖರ್ಗೆಯನ್ನೇ ಸಿಎಂ ಮಾಡಿ’ ಅಂದಿದ್ರು, ಆಗ ಮಾಡಿದ್ರಾ? : ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸಿಎಂ ಮಾಡೋದಾಗಿ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಸಿಕ್ಕಾಗಲೇ ಕಾಂಗ್ರೆಸ್ ನವರು ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಕುಟುಕಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಅಂತಾ ಹೇಳಿದ್ರಲ್ಲ. ಆವಾಗ್ಲೇ ಮಾಡಲಿಲ್ಲ. ಇವಾಗ ಮಾಡ್ತಾರೆ ಅಂದ್ರೆ ಏನರ್ಥ. ದಲಿತ ಸಮುದಾಯದ ಮತ ಓಲೈಕೆಗಾಗಿ ಈ ರೀತಿ ಹೇಳಿಕೆ ಹೊರಬರುತ್ತಿದೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕರೇ, ಇದಕ್ಕೆ ಏನೆಂದು ಹೆಸರಿಡುತ್ತೀರಿ : ಕಾಂಗ್ರೆಸ್ ವ್ಯಂಗ್ಯ

ನಮಗೆ ಶಾಕ್ ಅಂದವರಿಗೆ ಶಾಕ್ ಕಾದಿದೆ

ನಾಳೆಯಿಂದ ಬಹಳಷ್ಟು ಜನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಇಷ್ಟು ದಿನ ಜೆಡಿಎಸ್ ಗೆ ಶಾಕ್ ಅಂದವರು ಇವಾಗ ಅವರಿಗೆ ಶಾಕ್ ಆಗ್ತಿದೆ. ನಮಗೆ ಯಾವುದು ಶಾಕ್ ಇಲ್ಲ, ಹಲವರು ಸೇರ್ಪಡೆ ಆಗ್ತಾರೆ. ಜೇವರ್ಗಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಫೈನಲ್ ಆಗಿದೆ ಎಂದು ತಿಳಿಸಿದ್ದಾರೆ.

ಬಹಳ ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೊದವರಿದ್ದಾರೆ. ಅವರೆಲ್ಲರೂ ವಾಪಸ್ ಬರೋದಕ್ಕೆ ಚರ್ಚೆ ಆಗಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇಲ್ಲ ಅಂತಾ ಹೇಳುತ್ತಿದ್ದರು. ಆದರೆ, ಇವಾಗ ಉತ್ತರ ಕರ್ನಾಟಕದಲ್ಲಿ  30 ರಿಂದ 40 ಜನ ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES