ಬೆಂಗಳೂರು : ಅಂತೂ, ಇಂತು ಹಾಸನ ಟಿಕೆಟ್ ಗೊಂದಲ ಫೈನಲ್ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ನಾಳೆ ಬೆಳಗ್ಗೆ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದ್ದು ಹಾಸನ ಟಿಕೆಟ್ ಭವಾನಿಗೋ ಅಥವಾ ಕಾರ್ಯಕರ್ತನಿಗೋ ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಹೌದು, ಇದೇ ಮೊದಲ ಬಾರಿಗೆ ದೇವೇಗೌಡರ ಕುಟುಂಬದಲ್ಲಿ ಟಿಕೆಟ್ ಫೈಟ್ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಅಖಾಡಕ್ಕೆ ಇಳಿದ್ರೂ ಹಾಸನ ಟಿಕೆಟ್ ಗೊಂದಲ ಇತ್ಯರ್ಥವಾಗಿಲ್ಲ. ರೇವಣ್ಣ ಹಾಗೂ ಕುಮಾರಸ್ವಾಮಿ ತಮ್ಮ ಪಟ್ಟು ಬಿಟ್ಟಿಲ್ಲ.
ನಾಳೆ 2ನೇ ಪಟ್ಟಿ ರಿಲೀಸ್
ಇನ್ನೂ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಕಲಬುರ್ಗಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾಳೆ ಬೆಳಗ್ಗೆ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದಿದ್ದು, ಎಲ್ಲರ ಚಿತ್ತ ಹಾಸನ ಜೆಡಿಎಸ್ ಟಿಕೆಟ್ ನತ್ತ ನೆಟ್ಟಿದೆ.
ಇದನ್ನೂ ಓದಿ : ದೊಡ್ಡ ಘೋಷಣೆ : ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ
ನನ್ನ ಲಿಸ್ಟ್ ನಲ್ಲಿ ಬದಲಾವಣೆ ಇಲ್ಲ
ನಾಳೆ ಬೆಳಗ್ಗೆ ಎರಡನೇ ಪಟ್ಟಿ ರಿಲೀಸ್ ಮಾಡುತ್ತೇನೆ. ಲಿಸ್ಟ್ ಬಿಡುಗಡೆ ಮಾಡಲು ಮೆಂಟಲಿ ರೆಡಿ ಇದ್ದೀನಿ. ನಾಳೆ ಮಧ್ಯಾಹ್ನದ ಒಳಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಹಾಸನ ಟಿಕೆಟ್ ಗೊಂದಲ ವಿಚಾರದ ಬಗ್ಗೆ ತೆಲೆ ಕೆಡಿಸಿಕೊಳ್ಳಬೇಡಿ. ಹಾಸನದ ಗೊಂದಲವನ್ನು ಬಗೆಹರಿಸೋಣ ಬಿಡಿ. ನನ್ನ ಲಿಸ್ಟ್ ನಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಮೂಲಕ ಭವಾನಿಗೆ ಟಿಕೆಟ್ ಇಲ್ಲ ಎಂಬ ಸುಳಿವು ನೀಡಿದ್ದಾರೆ.
ದತ್ತಾ ದೊಡ್ಡವ್ರ ಸಂಪರ್ಕದಲ್ಲಿದ್ದಾರೆ
ವೈಎಸ್ ವಿ ದತ್ತಾ ಅವರು ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ. ದತ್ತಾ ಶಾಸಕರಾಗಿದ್ದಾಗಲು ನನ್ನ ಜೊತೆ ಸಂಪರ್ಕ ಇಲ್ಲ. ಅವರ ಸಂಪರ್ಕ ನನಗೆ ಅವಶ್ಯಕತೆನೂ ಇರಲಿಲ್ಲ. ಮಾಜಿ ಸಚಿವ ಎಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ಅವರಂಥ ದೊಡ್ಡವರ ಜೊತೆ ಸಂಪರ್ಕದಲ್ಲಿರೋದು ಎಂದು ಹೇಳಿದ್ದಾರೆ.
ಪಂಚರತ್ನ ಯಾತ್ರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ನಡೆದಿದೆ. ಆದರೆ, ಯಾತ್ರೆಯಲ್ಲಿ ಏಳೆಂಟು ಕ್ಷೇತ್ರಗಳ ಬಗ್ಗೆ ಅಭ್ಯರ್ಥಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನು ಈ ಬಾರಿ 120 ಕ್ರಾಸ್ ಮಾಡಲೇಬೇಕು ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.