Wednesday, January 22, 2025

ಸಿದ್ದು ವಿರುದ್ಧ ಸ್ಪರ್ಧೆ : ‘ಕನಸಲ್ಲೂ ಎಣಿಸಿರಲಿಲ್ಲ, ವಿಧಿ ನಿಯಮ’ ಎಂದ ಸೋಮಣ್ಣ

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ಕಣಕ್ಕಿಳಿಯುತ್ತಿರುವ ವಸತಿ ಸಚಿವ ವಿ. ಸೋಮಣ್ಣ ಎರಡು ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿರುವ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ವಿಧಿ ನಿಯಮ, ವರಿಷ್ಠರ ತಿರ್ಮಾನದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೈಕಮಾಂಡ್ ಎರಡು ಕಡೆ ಟಿಕೆಟ್‌ ಕೊಡ್ತಾರೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ನನಗೆ ಎರಡು ಕಡೆ ಅವಕಾಶ ಕೊಟ್ಟ ಹೈಕಮಾಂಡ್‌ಗೆ ಧನ್ಯವಾದ ಎಂದು ಹೇಳಿದ್ದಾರೆ.

ಹೈಕಮಾಂಡ್ ಈ ರೀತಿಯ ಟಾಸ್ಕ್ ನೀಡುತ್ತೆ ಅಂತ ಅಂದು ಕೊಂಡಿರಲಿಲ್ಲ. ನನ್ನ ಮಗನಿಗೆ ಗುಬ್ಬಿ ಅಥವಾ ಗೋವಿಂದರಾಜನಗರಕ್ಕೆ ಟಿಕೆಟ್‌ ಕೇಳಿದ್ದೇನೆ. ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಲ್ಹಾದ್ ಜೋಶಿ ಬಳಿ ಮಾತಾಡಿದ್ದೀನಿ. ಗೋವಿಂದರಾಜನಗರದಲ್ಲಿ ಯಾರಿಗೆ ಟಿಕೆಟ್ ಕೊಟ್ರು, ನನ್ನ ಬೆಂಬಲ ಇದೆ ಎಂದು ಸೋಮಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಪಟ್ಟಿ ‘ಕೈ’ ನಾಯಕರ ಎದೆ ನಡುಗಿಸಿದೆ : ಈಶ್ವರಪ್ಪ

ಅಪ್ಪ ಮಕ್ಕಳು ಗೆಲ್ಲಬಾರದು

ಈ ಅಪ್ಪ ಮಕ್ಕಳು ಮಾತ್ರ ಗೆಲ್ಲಬಾರದು. ಇಂತಹ ಪಾಪಿಗಳು ಗೆಲ್ಲಬಾರದು. ಒಳ್ಳೆತನದಿಂದ ಕೆಲಸ ಮಾಡಿದ್ದೀನಿ, ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಮಗನ ಬಗ್ಗೆ ಏನೇನು ಹೇಳಬೇಕೋ ಹೇಳಿದ್ದೀನಿ. ಮಗನಿಗೆ ಒಳ್ಳೆ ಕೆಲಸ ಮಾಡಿದ್ರೆ ಅವನು ಕೂಡ ಬೆಳೆಯುತ್ತಾನೆ. ನನ್ನ ಶವ ಸಂಸ್ಕಾರ ಆಗೋ ತನಕ ಜನ ನನ್ನ ಜೊತೆಗೆ ಇರ್ತಾರೆ ಎಂದು ಹೇಳಿದ್ದಾರೆ.

ಭೂಗಳ್ಳರಿಗೆ ಕಾಂಗ್ರೆಸ್ ಟಿಕೆಟ್

ಭೂಗಳ್ಳರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರನ್ನು ಸೋಲಿಸಬೇಕು. ಜನರಿಗೆ ಯಾವತ್ತೂ ಬುದ್ದಿ ಬರುತ್ತೋ ಗೊತ್ತಿಲ್ಲ. ಅವರಿಗೆ ಬುದ್ದಿ ಬರೋ‌ ಹೊತ್ತಿಗೆ ನಾನ್ ಇರ್ತಿನಿ ಇಲ್ವೋ ಗೊತ್ತಿಲ್ಲ. ಜನರು ಬೇಗ ಎಚ್ಚತ್ಕೋಬೇಕಿದೆ. ನಾನು ಬಂದಿದ್ದು ಬ್ಯಾಗ್ ಇಟ್ಕೊಂಡು, ಸಂಜೆ ಕಾಲೇಜಿನಲ್ಲಿ ಓದಿದೆ. ದೇವರು ನನ್ನ ಜೊತೆಗೆ ಇದ್ದಾನೆ. ನನ್ನ ಕೆಲಸದಲ್ಲಿ ಇದ್ದಾನೆ. ಸೋಲು ಗೆಲುವುವನ್ನು ಮತದಾರ, ದೇವರು ನಿರ್ಧಾರ ಮಾಡ್ತಾನೆ. ಇದು ನನ್ನ ಜನ್ಮ ಭೂಮಿ, ಕರ್ಮ ಭೂಮಿಗೆ ಹೋಗ್ತಾ ಇದೀನಿ ಎಂದು ಸೋಮಣ್ಣ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES