Friday, November 22, 2024

ನನ್ನ ಏಳಿಗೆ ಸಹಿಸದವರು ಅಪಪ್ರಚಾರ ಮಾಡ್ತಿದ್ದಾರೆ : ಬಿ.ಸಿ ಪಾಟೀಲ್

ಬೆಂಗಳೂರು : ಹಿರೇಕೆರೂರು ಕ್ಷೇತ್ರದಲ್ಲಿಗ ಬಿ.ಸಿ. ಪಾಟೀಲ್ ಅವರ ಬಿಜೆಪಿ ಹವಾ ಜೋರಾಗಿದೆ. ತಮ್ಮ ಗೃಹ ಕಚೇರಿಯಲ್ಲಿಂದು ಹಿರೇಕೆರೂರ-ರಟ್ಟೀಹಳ್ಳಿ ತಾಲೂಕಿನ ಹಾಲುಮತ ಸಮಾಜದ ಮುಖಂಡರ ಸಭೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಾನು ಯಾವತ್ತೂ ಹಾಲುಮತ ಸಮಾಜದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಯಾವ ಜಾತಿಯನ್ನೂ ನೋಡದೇ ಮತಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಏಳಿಗೆ ಹಾಗೂ ಅಭಿವೃದ್ಧಿ ಸಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸತ್ಯ ಜನರಿಗೆ ಗೊತ್ತಿದೆ. ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ರಸ್ತೆ, ನೀರಾವರಿ, ಕೃಷಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ  ಮಾಡಿದ್ದೇನೆ ಎಂದು ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಎಲ್ಲ ಸಮಾಜಗಳು ನನ್ನ ಕಣ್ಣುಗಳಿದ್ದಂತೆ

ಎಲ್ಲ ಸಮಾಜಗಳು ನನ್ನ ಕಣ್ಣುಗಳಿದ್ದಂತೆ. ಬಿಜಪಿ ಸರ್ಕಾರ ಎಲ್ಲಾ ಸಮುದಾಯಗಳನ್ನು ಒಂದೇ ರೀತಿ ಕಾಣುತ್ತಿದೆ. ಎಲ್ಲರಿಗೂ ಸಮಾನ ಹಾಗೂ ತಾರತಮ್ಯವಿಲ್ಲದೆ ಮೀಸಲಾತಿ ಕೊಡಲೇಗಿದೆ. ಎಲ್ಲರೂ ನನಗೆ ಮತ ನೀಡಿ, ಆಶೀರ್ವದಿಸುವಂತೆ ಬಿ.ಸಿ ಪಾಟೀಲ್ ವಿನಂತಿಸಿಕೊಂಡರು.

ಇದನ್ನೂ ಓದಿ : ಬಿಜೆಪಿ ಮೊದಲ ಪಟ್ಟಿ ಔಟ್ : ಇವರೇ ನಿಮ್ಮ ಕ್ಷೇತ್ರದ ಅಭ್ಯರ್ಥಿಗಳು

ಕಷ್ಟ ಕಾಲದಲ್ಲಿ ಕೈ ಹಿಡಿಯುವ ನಾಯಕ

ಈ ವೇಳೆ ಹಾಲುಮತ ಸಮಾಜದ ಮುಖಂಡರಾದ ಆನಂದಪ್ಪ ಹಾದಿಮನಿ, ರಾಜು ಬಟ್ಳಕಟ್ಟಿ, ಪುಟ್ಟೇಶ ಗೊರವರ ಅನೇಕರು ಮಾತನಾಡಿ, ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿಯುವ ನಾಯಕ ಅಂದ್ರೆ ಬಿ.ಸಿ. ಪಾಟೀಲ ಅವರು ಮಾತ್ರ. ಅವರನ್ನು ಬಿಟ್ಟು ಬೇರೆಯವರನ್ನು ಬೆಂಬಲಿಸುವುದಿಲ್ಲ. ಗೆಲುವು ಬಿಜೆಪಿ ಪಕ್ಷದ್ದೇ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಬನ್ನಿಕೋಡ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸಿದ್ಧಾಂತ ಹಾಗೂ ಬಿ.ಸಿ ಪಾಟೀಲ್ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

RELATED ARTICLES

Related Articles

TRENDING ARTICLES