Saturday, December 28, 2024

ಬಿಜೆಪಿ ನಾಯಕರೇ, ಇದಕ್ಕೆ ಏನೆಂದು ಹೆಸರಿಡುತ್ತೀರಿ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪದಲ್ಲೇ ರಾಜಕೀಯ ನಾಯಕರು ಸಮುದಾಯಗಳನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಮಂತ್ರ ಅವರನ್ನು ಪೇಚಿಗೆ ಸಿಲುಕಿಸಿದೆ.

ಹೌದು, ರಂಜಾನ್ ಉಪವಾಸ ಮಾಸ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಮಸೀದಿಗೆ ಭೇಟಿ ನೀಡಿದ್ದು, ರಾಜ್ಯ ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿಬಳಸಿಕೊಂಡಿದೆ. ಸಚಿವ ಡಾ.ಕೆ ಸುಧಾಕರ್ ಮಸೀದಿ ಭೇಟಿ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್, ಚುನಾವಣೆ ಬಂದಾಗ ವಾತಾವರಣದಲ್ಲಿ ವಿಶೇಷ ಬದಲಾವಣೆಯಾಗಿದೆ ಎಂದು ಕುಟುಕಿದೆ.

ಇದನ್ನೂ ಓದಿ : ಸಿದ್ದು ವಿರುದ್ಧ ಸ್ಪರ್ಧೆ : ‘ಕನಸಲ್ಲೂ ಎಣಿಸಿರಲಿಲ್ಲ, ವಿಧಿ ನಿಯಮ’ ಎಂದ ಸೋಮಣ್ಣ

ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿದ್ದ ಬಿಜೆಪಿ

ಸುಧಾಕರ್ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಹಿಜಾಬ್, ಹಲಾಲ್, ಆಜಾನ್ ಎಂದು ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿದ್ದ ಬಿಜೆಪಿ ನಾಯಕರು ಮಸೀದಿಯ ಒಳಹೋಗುವ, ಹೊರಬರುವ ದೃಶ್ಯಗಳು ವಿಶೇಷವಾಗಿ ಕಾಣಸಿಗುತ್ತಿವೆ ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ನಾಯಕರೇ, ಇದಕ್ಕೆ ಏನೆಂದು ಹೆಸರಿಡುತ್ತೀರಿ? ತುಷ್ಟಿಕರಣ ರಾಜಕೀಯವೇ, ಓಲೈಕೆ ರಾಜಕೀಯವೇ ಅಥವಾ ಸೆಕ್ಯುಲರ್ ರಾಜಕೀಯವೇ ಎಂದು ಬಿಜೆಪಿ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿದೆ.

RELATED ARTICLES

Related Articles

TRENDING ARTICLES