Sunday, January 19, 2025

‘ಆ.. ದೇವರು ಬಂದ್ರೂ ನನ್ನ ಮನವೊಲಿಸಲು’ ಸಾಧ್ಯವಿಲ್ಲ : ಸೊಗಡು ಶಿವಣ್ಣ

ಬೆಂಗಳೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಹಾಲಿ ಹಾಗೂ ಮಾಜಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಬಿಜೆಪಿ ಹೈ ಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಹೌದು, ಇದು ನನ್ನ ಕೊನೆಯ ಚುನಾವಣೆ. ಹೀಗಾಗಿ, ನನಗೆ ಟಿಕೆಟ್ ಪಕ್ಕಾ ಎನ್ನುವುದು ಮಾಜಿ ಸಚಿವ ಸೊಗಡು ಶಿವಣ್ಣ ಪಟ್ಟು. ಇನ್ನೊಂದೆಡೆ, ಈಗಾಗಲೇ ಮುಂದಿನ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸಲ್ಲ. ಹಾಲಿ ನಗರ ಶಾಸಕರಾಗಿರುವ ತಮ್ಮ ಪುತ್ರ ಜಿ.ಬಿ ಜ್ಯೋತಿಗಣೇಶ್ ಗೇ ಟಿಕೆಟ್ ನಿಡಬೇಕು ಎಂದು ಸಂಸದ ಜಿ.ಎಸ್ ಬಸವರಾಜ್ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ತುಮಕೂರು ನಗರ ಟಿಕೆಟ್ ಫೈಟ್ ವರಿಷ್ಠರಿಗೆ ತಲೆಬಿಸಿ ತಂದಿದೆ.

ಇನ್ನು ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಸೊಗಡು ಶಿವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಟಿಕೆಟ್ ನನಗೆ ಖಚಿತ..ಖಚಿತ. ದೆಹಲಿಯಲ್ಲಿ ಎಲ್ಲರಿಗೂ ಮನವಿ ಮಾಡಲಾಗಿದೆ. ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ : ಇವರೇ ತುಮಕೂರು ನಗರದ ಅಭ್ಯರ್ಥಿ?

ವೋಟಿಗೊಂದು, ನೋಟಿಗೊಂದು ಜೋಳಿಗೆ

ನಾಮಪತ್ರ ಸಲ್ಲಿಕೆ(ನಾಮಿನೇಷನ್ ಪೈಲ್‌) ಮಾಡಲು ಸಿದ್ದತೆ ನಡೆಸಿಕೊಳ್ಳಲಾಗಿದೆ. ಒಂದು ವೋಟು, ಇನ್ನೊಂದು ನೋಟಿಗೆ ಜೋಳಿಗೆ ಹಾಕಿಕೊಂಡಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಲಿ. ಕಿವಿಗೆ ಕೇಳಲಿ ಎಂದು ತಮಟೆ ವಾದ್ಯವು ಕೊಟ್ಟಿದೆ. ಎಲ್ಲಾ ಬಂಧುಗಳು ಬಾಯಿಬಿಟ್ಟು ಹೇಳ್ತಿದ್ದಾರೆ. ನೀವು ಸ್ಪರ್ದೇ ಮಾಡಿ ಅಂತಾ ಎಂದು ಹೇಳಿದ್ದಾರೆ.

ಬೊಮ್ಮಾಯಿಗೆ ಕಾಲದಿಂದಲೂ ಆತ್ಮೀಯ

ಜನರಿಂದ ಬಂದ ದೇಣಿಗೆ ಡೇಪಾಸಿಟ್ ಮಾಡ್ತಿನಿ. ಜನರ ಋಣ ತೀರಿಸಬೇಕಿದೆ. ಟಿಕೆಟ್ ಸಿಗುವುದು ಖಚಿತ. ಸ್ಪರ್ಧೆ ಮಾಡುವುದು ಖಚಿತ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆ ಕಾಲದಿಂದಲೂ ಆತ್ಮೀಯನಾಗಿದ್ದೇನೆ ಎಂದು ರಾಜ್ಯ ನಾಯಕರಿಗೆ ಒತ್ತಡ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ನಾನು ಭ್ರಷ್ಟಾಚಾರ ವಿರುದ್ಧ ನಾನು ಮಾತನಾಡಿದ್ದೀನಿ. ಇದು ನನ್ನ ಕೊನೆಯ ಚುನಾವಣೆ. ಆದರೆ, ರಾಜಕೀಯದಿಂದ ನಿವೃತ್ತವಲ್ಲ. ಟಿಕೆಟ್ ಸಿಗದಿದ್ದರೆ ನನ್ನನ್ನು ಯಾರೂ ಸಮಾಧಾನ ಮಾಡಲು ಸಾಧ್ಯವಿಲ್ಲ. ಆ ದೇವರು ಬಂದರೂ ನನ್ನ ಮನವೊಲಿಸಲು ಸಾಧ್ಯವಿಲ್ಲ. ನಾನು ಕಣದಲ್ಲಿ ಇರುವುದು ನಿಶ್ಚಿತ ಎಂದು ಖಡಕ್ ಆಗಿಯೇ ಹೇಳಿದ್ದಾರೆ.

RELATED ARTICLES

Related Articles

TRENDING ARTICLES