Wednesday, January 22, 2025

ಸಮೃದ್ಧಿ ಮಂಜುನಾಥ್ ಗೆ ‘ಕುರಿ ಗಿಫ್ಟ್’ ಕೊಟ್ಟ ಕಾರ್ಯಕರ್ತರು

ಬೆಂಗಳೂರು : ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ಭರ್ಜರಿ ಮತ ಬೇಟೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಸಮೃದ್ಧಿ ಮಂಜುನಾಥ್ ಅವರಿಗೆ ಕುರಿ ಗಿಫ್ಟ್ ಕೊಟ್ಟು ತಮ್ಮ ಅಭಿಮಾನ ಮೆರೆದಿದ್ದಾರೆ.

ಮುಳಬಾಗಿಲು ವಿಧಾನಸಭೆ ಕ್ಷೇತ್ರ ದೇವರಾಯಸಮುದ್ರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ದಳಪತಿಗಳಿಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಬಿಸಿಲನ್ನು ಲೆಕ್ಕಿಸದೆ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಕಾರ್ಯಕ್ರಮದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಗ್ರಾಮದ ತಾವು ರೈತರು ಬೆಳೆದ ಬೆಳೆಗಳು ಹಾಗೂ ಸಾಕಿರುವಂತಹ ಕುರಿಗಳನ್ನು ನೀಡುವುದು ಕಂಡ ಸಮೃದ್ಧಿ ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಎರಡು ಬಾರಿ ಹೃದಯ ಚಿಕಿತ್ಸೆ ಮಾಡಿಸಿಕೊಂಡರೂ, ನಿಮಗಾಗಿ ಯೋಚನೆ ಮಾಡ್ತೀದಿನಿ : ಕುಮಾರಸ್ವಾಮಿ

ಪ್ರತಿ ಗ್ರಾಮಗಳಲ್ಲೂ ಈ ಬಾರಿ ಸಮೃದ್ಧಿ ಮಂಜುನಾಥ್ ಅವರು ಗೆಲ್ಲಲ್ಲೇಬೇಕು ಎಂದು ಹಿರಿಯರು, ಮಹಿಳೆಯರು ಆಶೀರ್ವಾದ ಮಾಡಿದ್ದಾರೆ. ಯುವಕರ ದಂಡು ಆನೆ ಬಲದಂತೆ ಸಮೃದ್ಧಿ ಮಂಜುನಾಥ್ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಇನ್ನೂ ಈ ವೇಳೆ ಮಾತನಾಡಿರುವ ಸಮೃದ್ಧಿ ಮಂಜುನಾಥ್, ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಪ್ರಚಾರ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಮುಳಬಾಗಿಲು ಕ್ಷೇತ್ರದ ವ್ಯಾಪ್ತಿಯ ನಡೆದ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಕಾರ್ಯಕ್ರಮದಲ್ಲಿ ಸಮೃದ್ಧಿ ಮಂಜುನಾಥ್ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

RELATED ARTICLES

Related Articles

TRENDING ARTICLES