Monday, December 23, 2024

Petrol Price Today: ಇಂದು ಪೆಟ್ರೋಲ್,ಡೀಸೆಲ್ ಬೆಲೆ ಎಷ್ಟಾಗಿದೆ ನೋಡಿ..?  

ನೀವು ನಿತ್ಯ ಬಳಕೆ ಮಾಡುವ ಪೆಟ್ರೋಲ್,ಡೀಸೆಲ್ ಬೆಲೆ ಎಷ್ಟು ಎಂದು ಯೋಜಿಸುತ್ತಿದೀರಾ..? ಆಗಿದ್ರೆ ನೀವು ಈ ಮಾಹಿತಿಯನ್ನೂ ಓದಲೇ ಬೇಕು

ಪೆಟ್ರೋಲ್,ಡೀಸೆಲ್ ಬೆಲೆಯಲ್ಲಿ ನಿತ್ಯವೂ ಬದಲಾವಣೆಗಳು ಆಗುತ್ತಲೇ ಇರುತ್ತವೆ.ಅದ್ರೆ ಈ ಸಲ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ಬೆಲೆಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಸತತ 323ನೇ ದಿನವಾಗಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದ ಗ್ರಾಹಕರು ನಿರಾಳರಾಗಿದ್ದಾರೆ.

ದೇಶದಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ದರ

ಪ್ರಸ್ತುತ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ 94.27 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಮತ್ತೊಂದೆಡೆ, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 102.63 ರೂ ಮತ್ತು ಡೀಸೆಲ್ ರೂ 94.24 ಕ್ಕೆ ಮಾರಾಟ ಮಾಡಲಾಗುತ್ತಿದೆ.

ದೆಹಲಿ- ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಲೀಟರ್‌ಗೆ 89.62 ರೂ ಮುಂಬೈ- ಪೆಟ್ರೋಲ್ 106.31 ಮತ್ತು ಡೀಸೆಲ್ ಲೀಟರ್‌ಗೆ 94.27 ರೂ ಕೋಲ್ಕತ್ತಾ – ಪ್ರತಿ ಲೀಟರ್ ಪೆಟ್ರೋಲ್ 106.03 ಮತ್ತು ಡೀಸೆಲ್ 92.76 ರೂ ಚೆನ್ನೈ – ಪ್ರತಿ ಲೀಟರ್ ಪೆಟ್ರೋಲ್ ರೂ 102.63 ಮತ್ತು ಡೀಸೆಲ್ ರೂ 94.24

ರಾಜ್ಯದಲ್ಲಿ ಪೆಟ್ರೋಲ್ ದರ

 ಬಾಗಲಕೋಟ-102.68 ₹/ಲೀ,ಬೆಂಗಳೂರು-101.94 ₹/ಲೀ ,ಬೆಂಗಳೂರು ಗ್ರಾಮಾಂತರ-102.01 ₹/ಲೀ,  ಬೆಳಗಾವಿ-102.13 ₹/ಲೀ ,ಬಳ್ಳಾರಿ-103.78 ₹/ಲೀ,ಬೀದರ್ -102.28 ₹/ಲೀ, ಬಿಜಾಪುರ- 102.12 ₹/ಲೀ, ಚಾಮರಾಜನಗರ- 101.93 ₹/ಲೀ,  ಚಿಕ್ಕಬಳ್ಳಾಪುರ-101.94 ₹/ಲೀ,  ಚಿಕ್ಕಮಗಳೂರು -103.11 ₹/ಲೀ,  ಚಿತ್ರದುರ್ಗ -104.41 ₹/ಲೀ ,ದಕ್ಷಿಣ ಕನ್ನಡ -101.13 ₹/ಲೀ,  ದಾವಣಗೆರೆ- 103.46 ₹/ಲೀ,  ಧಾರವಾಡ- 101.71 ₹/ಲೀ ,ಗದಗ -102.25 ₹/ಲೀ,  ಗುಲ್ಬರ್ಗ -101.71 ₹/ಲೀ ,ಹಾಸನ -102.13 ₹/ಲೀ,  ಹಾವೇರಿ -102.58 ₹/ಲೀ,  ಕೊಡಗು – 103.36 ₹/ಲೀ ,ಕೋಲಾರ -101.81 ₹/ಲೀ, ಕೊಪ್ಪಳ-103.05 ₹/ಲೀ ,ಮಂಡ್ಯ -101.61 ₹/ಲೀ,  ಮೈಸೂರು-101.50 ₹/ಲೀ, ರಾಯಚೂರು-101.84 ₹/ಲೀ,  ರಾಮನಗರ -102.28 ₹/ಲೀ,  ಶಿವಮೊಗ್ಗ-103.26 ₹/ಲೀ, ತುಮಕೂರು -102.45 ₹/ಲೀ, ಉಡುಪಿ -101.44 ₹/ಲೀ,  ಉತ್ತರ ಕನ್ನಡ -102.49 ₹/ಲೀ, ಯಾದಗಿರಿ 102.43- ₹/ಲೀ ಇದೆ.

ನಿಮ್ಮ ನಗರದಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್  ದರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ ಮತ್ತು ಬೆಳಿಗ್ಗೆ 6 ಗಂಟೆಗೆ ನವೀಕರಿಸಲಾಗುತ್ತದೆ. ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ದರವನ್ನು ಸಹ ನೀವು ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು ಸಿಟಿ ಕೋಡ್ ಜೊತೆಗೆ 9224992249 ಗೆ ಕಳುಹಿಸಬಹುದು ಮತ್ತು BPCL ಗ್ರಾಹಕರು RSP ಅನ್ನು 9223112222 ಗೆ ಕಳುಹಿಸಬಹುದು. ಆದರೆ, HPCL ಗ್ರಾಹಕರು HP ಬೆಲೆಯನ್ನು 9222201122 ಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿಯಬಹುದು.

RELATED ARTICLES

Related Articles

TRENDING ARTICLES