Monday, December 23, 2024

ಎರಡು ಬಾರಿ ಹೃದಯ ಚಿಕಿತ್ಸೆ ಮಾಡಿಸಿಕೊಂಡರೂ, ನಿಮಗಾಗಿ ಯೋಚನೆ ಮಾಡ್ತಿದ್ದೀನಿ : ಕುಮಾರಸ್ವಾಮಿ

ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ.

‘ನಾನು ಎರಡು ಬಾರಿ ಹೃದಯದ ಚಿಕಿತ್ಸೆ ಮಾಡಿಸಿಕೊಂಡರೂ ನಿಮ್ಮ ಸಲುವಾಗಿ ಯೋಚನೆ ಮಾಡ್ತೀದಿನಿ. ಕಳೆದ 4 ತಿಂಗಳಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಜೆಡಿಎಸ್ ಗೆ ಸ್ಪಷ್ಟ ಬಹುಮತ ಸಿಕ್ಕರೆ, ನಿಮ್ಮೆಲ್ಲರ ಕಷ್ಟ ದೂರ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇನ್ನೂ ಎರಡ್ಮೂರು ಸಲ ಬರುತ್ತೇನೆ

ನಾನು ಸವದತ್ತಿ, ಜೋಯಿಡಾ, ದಾಂಡೇಲಿ ಕಾರ್ಯಕ್ರಮಕ್ಕೆ ಹೋಗಬೇಕಿದೆ. ವೀರಭದ್ರಪ್ಪ ಹಾಲರವಿ ಇದೀಗ ಸವಾಲ್ ಸ್ವೀಕರಿಸಿ ಬಂದಿದ್ದಾರೆ. ಇದು ಕಳೆದ ಎರಡು ದಿನಗಳ ಹಿಂದೆ ಫಿಕ್ಸ್ ಆಗಿರೋ ಸಭೆ. ದೂರುವಾಣಿ ಮೂಲಕ ಈ ಸಭೆ ಫಿಕ್ಸ್ ಆಗಿತ್ತು. ತರಾತುರಿಯಲ್ಲಿ ಕಾರ್ಯಕ್ರಮ ಏರ್ಪಾಡು ಮಾಡಿದ್ದೇವೆ. ಹುಬ್ಬಳ್ಳಿ-ಧಾರಾವಡಕ್ಕೆ ನಾನು ಇನ್ನೂ ಎರಡ್ಮೂರು ಸಲ ಬರುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : ದೇವೇಗೌಡರಿಗೂ ರೇವಣ್ಣ ಮನವೊಲಿಸುವ ಶಕ್ತಿ ಇಲ್ಲ : ಎಚ್.ಡಿ ಕುಮಾರಸ್ವಾಮಿ

ದೇವಸ್ಥಾನದಲ್ಲಿ ಮಲಗಿದ್ರೆ ಪೊಲೀಸರು ಓಡಿಸ್ತಾರೆ

ನಾನು ಸಿದ್ದಾರೂಢರ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ‌ಪಡೆದಿದ್ದೇನೆ. ಕೆಲ ‌ಮಹಿಳೆಯರು ಬಂದು ಮನೆ ಇಲ್ಲ ಎಂದು ಅಳಲು ತೋಡಿಕೊಂಡರು. ದೇವಸ್ಥಾನದಲ್ಲಿ ಮಲಗಿದ್ರೆ ಪೊಲೀಸರು ಓಡಿಸ್ತಾರೆ ಎಂದರು. ಬಡ ತಾಯದಿಂದರಿಗೆ ಮನೆ ಇಲ್ಲ ಅಂತ ಕಣ್ಣೀರು ಹಾಕಿದ್ರು ಎಂದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

RELATED ARTICLES

Related Articles

TRENDING ARTICLES