ಜಯಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ, ಅದರಲ್ಲೂ ಪ್ರಮುಖವಾಗಿ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಮುಲ್ಕ ಮೈದಾನ್ ತೋಫ್ ಸೇರಿದಂತೆ ಹಲವು ಪ್ರವಾಸಿ ತಾಣಗಳ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ.
ಹೌದು ವಿಜಯಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ ಅದರಲ್ಲೂ ಪ್ರಮುಖವಾಗಿ ವಿಶ್ವ ವಿಖ್ಯಾತ ಗೋಳಗುಮ್ಮಟ ಇಬ್ರಾಹಿಂ ರೋಜಾ, ಮುಲ್ಕ ಮೈದಾನ ತೋಪ, ಬಾರಾ ಕಮಾನ್ ಹೀಗೆ ನಗರದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಈ ಪ್ರವಾಸಿ ತಾಣಗಳ ವಿಕ್ಷಣೆಗೆ ಪ್ರತಿದಿನ ಕೂಡ ಹೆಚ್ಚಿನ ಸಂಖ್ಯೆಯ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಳೆದ ವರ್ಷ ಕ್ಕೆ ಹೋಲಿಸದರೆ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆ ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಭಾರೀ ಏರಿಕೆ ಕಂಡಿದೆ…
ಇದನ್ನೂ ಓದಿ : ಕಬ್ಬನ್ ಪಾರ್ಕ್ನಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ
ಜನವರಿ 2022 ರಲ್ಲಿ ಗೋಲಗುಂಬಜ ವಿಕ್ಷಣೆಗೆ 38913 ಜನ ಪ್ರವಾಸಿಗರು ದೇಶದ ಪ್ರವಾಸಿಗರು ಬಂದರೆ ವಿದೇಶಿಗರು 3 ಜನ ಬಂದಿದ್ದಾರಡಲೆ, 2022 ರ ಫೆಬ್ರವರಿಯಲ್ಲಿ 49120 ಜನ ದೇಶಿ ಪ್ರವಾಸಿಗರಿದ್ದರೆ 5 ಜನ ವಿದೇಶಿಗರು ಬಂದಿದ್ದಾರೆ, 2022 ರ ಮಾರ್ಚ ತಿಂಗಳಲ್ಲಿ 49804 ಜನ ದೇಶಿ ಪ್ರವಾಸಿಗರು ಬಂದರೆ 11 ಜನ ವಿದೇಶಿಗರು ಬಂದಿದ್ದಾರೆ, ಅದೇ ತರಹ 2023 ರ ಜನವರಿಯಲ್ಲಿ 82704 ದೇಶಿ ಪ್ರವಾಸಿಗರು, 137 ಜನ ವಿದೇಶಿಗರು, ಪೆಬ್ರವರಿ 2023 ರಲ್ಲಿ 55452 ದೇಶಿ ಪ್ರವಾಸಿಗರು ಬಂದರೆ 127 ಜನ ವಿದೇಶಿಗರು, ಇನ್ನೂ 2023 ರ ಮಾರ್ಚ ತಿಂಗಳಲ್ಲಿ 44882 ದೇಶಿ ಪ್ರವಾಸಿಗರು ಬಂದರೆ 96 ಜನ ವಿದೇಶಿ ಪ್ರವಾಸಿಗರು ಬಂದಿದ್ದಾರೆ. ಅದೇ ರೀತಿಯಾಗಿ ಇಬ್ರಾಹಿಂ ರೋಜಾ, ಬಾರಾಕಮಾನ, ಮುಲ್ಕ ಮೈದಾನ ತೋಪ್ ಸೇರಿದಂತೆ ಹಲವು ಪ್ರವಾಸಿ ತಾಣ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ…
ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಅದೇ ರೀತಿಯಾಗಿ ಪ್ರವಾಸಿಗರ ಸಂಖ್ಯೆ ಸಹಿತ ಹೆಚ್ಚಳವಾಗುತ್ತಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಶ್ವ ವಿಖ್ಯಾತ ಜೋಳ ಗುಮ್ಮಟ ಸೇರಿದಂತೆ ಹಲವು ಪ್ರವಾಸಿ ತಾಣ ವಿಕ್ಷಣೆ ಮಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ…