Wednesday, January 22, 2025

ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳಿಗೆ ಟಿಕೆಟ್ : 52 ಹೊಸ ಮುಖಗಳಿಗೆ ಮನ್ನಣೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಸಾದ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಪಟ್ಟಿಯನ್ನು ಘೋಷಿಸಿದ್ದಾರೆ. ಎರಡನೇ ಪಟ್ಟಿಯಲ್ಲಿ ಬಾಕಿ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಪಟ್ಟಿ ಬಿಡುಗಡೆ ಮಾಡಿದ ಅರುಣ್

ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ ಅವರು, ಪಕ್ಷದ 189 ಅಭ್ಯರ್ಥಿಗಳ ಹೆಸರಿದ್ದ ಮೊದಲ ಪಟ್ಟಿಯನ್ನು ಘೋಷಿಸಿದ್ದಾರೆ. ಈ ಪೈಕಿ ಒಬಿಸಿಗೆ 32, ಎಸ್ಸಿಗೆ 30, ಎಸ್ಟಿಗೆ 16 ಸ್ಥಾನ ನೀಡಲಾಗಿದ್ದು, 52 ಮಂದಿ ಹೊಸಬರಿದ್ದಾರೆ. ಅಭ್ಯರ್ಥಿಗಳ ಪೈಕಿ 9 ವೈದ್ಯರು, ಪಿಹೆಚ್ಚಿ, 8 ಮಹಿಳೆಯರು, 5 ವಕೀಲರು, ಮೂವರು ಶಿಕ್ಷಣತಜ್ಞರು, ಮೂವರು ನಿವೃತ್ತ ಅಧಿಕಾರಿಗಳು, 8 ಸಾಮಾಜಿಕ ಹೋರಾಟಗಾರರಿದ್ದಾರೆ.

ಇದನ್ನೂ ಓದಿ : ‘ಆ.. ದೇವರು ಬಂದ್ರೂ ನನ್ನ ಮನವೊಲಿಸಲು’ ಸಾಧ್ಯವಿಲ್ಲ : ಸೊಗಡು ಶಿವಣ್ಣ

ಪ್ರಮುಖ ಅಂಶಗಳು

  • 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್
  • 2ನೇ ಪಟ್ಟಿಯಲ್ಲಿ ಬಾಕಿ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ
  • ಹೊಸ ಮುಖ, ಹೊಸ ನೀತಿ, ಹೊಸತನಕ್ಕೆ ಮನ್ನಣೆ
  • ಹೊಸಬರಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್
  • ಕರುನಾಡು ಕುರುಕ್ಷೇತ್ರಕ್ಕೆ ಕದನ ಕಲಿಗಳನ್ನ ಇಳಿಸಿದ ಬಿಜೆಪಿ
  • ಮುಂದಿನ ನಾಯಕತ್ವ ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಿ
  • 52 ಹೊಸ ಮುಖಗಳಿಗೆ ಮನ್ನಣೆ
  • SC-30
  • ST-16
  • OBC-32
  • ವೈದ್ಯರು-9
  • ಪದವೀಧರರು-31
  • 8 ನಿವೃತ್ತ IAS ಅಧಿಕಾರಿಗಳಿಗೆ ಮಣೆ
  • ಒಬ್ಬ ನಿವೃತ್ತ IPS ಅಧಿಕಾರಿ
  • ಭಾಸ್ಕರ್‌ರಾವ್‌ಗೆ ಟಿಕೆಟ್
  • ಶಿಗ್ಗಾವಿಯಿಂದ ಬಸವರಾಜ ಬೊಮ್ಮಾಯಿಗೆ ಟಿಕೆಟ್

RELATED ARTICLES

Related Articles

TRENDING ARTICLES