Monday, December 23, 2024

RCBಗೆ ಸೋಲು : ‘ಕನ್ನಡಿಗ ರಾಹುಲ್’ ಬಳಗಕ್ಕೆ ರೋಚಕ ಜಯ

ಬೆಂಗಳೂರು : ಇಂದು ನಡೆದ ಐಪಿಎಲ್ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ವಿರುದ್ಧ ರೋಚಕ ಜಯ ದಾಖಲಿಸಿದೆ.

213 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 1 ವಿಕೆಟ್ ಗಳ ಜಯ ಸಾಧಿಸಿತು. ಲಕ್ನೋ ಪರ ಮಾರ್ಕಸ್ ಸ್ಟೋನಿಸ್ 65 ಹಾಗೂ ನಿಕೋಲಸ್ ಪೂರನ್ 62 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರ್ ಸಿಬಿ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್, ಪರ್ನೆಲ್ 3 ವಿಕೆಟ್, ಹರ್ಷಲ್ ಪಟೇಲ್ 2 ಹಾಗೂ ಕರಣ್ ಶರ್ಮಾ 1 ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಆರ್ ಸಿಬಿ ಪರ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 61, ಡುಪ್ಲೆಸಿಸ್ 46 ಎಸೆತಗಳಲ್ಲಿ ಅಜೇಯ 79* ಹಾಗೂ ಮ್ಯಾಕ್ಸ್ ವೆಲ್ 29 ಎಸೆತಗಳಲ್ಲಿ 59 ರನ್ ಗಳಿಸಿದರು.

ಇದನ್ನೂ ಓದಿ : RCB ಅಭಿಮಾನಿಗಳೇ ಎಚ್ಚರ : ನಿಮ್ಮ ಬಳಿ ಇರುವ ಟಿಕೆಟ್ ಅಸಲಿಯೋ? ನಕಲಿಯೋ? ಪರಿಶೀಲಿಸಿ

ವಿರಾಟ್ ಅಬ್ಬರ ವ್ಯರ್ಥ

ಆರ್ ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಕ್ನೋ ಬೌಲರ್ ಗಳ ವಿರುದ್ಧ ಅಬ್ಬರಿಸಿದ್ದಾರೆ. 4 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ ಆಕರ್ಷಕ ಅರ್ಧಶತಕ ಬಾರಿಸಿದರು. ಇದು ವಿರಾಟ್ ಕೊಹ್ಲಿ ಅವರ 46ನೇ ಐಪಿಎಲ್ ಅರ್ಧಶತಕವಾಗಿದ್ದು, ವಿರಾಟ್ ಆಟ ವ್ಯರ್ಥವಾಯಿತು.

RELATED ARTICLES

Related Articles

TRENDING ARTICLES