Saturday, August 23, 2025
Google search engine
HomeUncategorizedಸಮೃದ್ಧಿ ಮಂಜುನಾಥ್ ಪರ ಕುಮಾರಸ್ವಾಮಿ ಭರ್ಜರಿ ಮತಬೇಟೆ

ಸಮೃದ್ಧಿ ಮಂಜುನಾಥ್ ಪರ ಕುಮಾರಸ್ವಾಮಿ ಭರ್ಜರಿ ಮತಬೇಟೆ

ಬೆಂಗಳೂರು : ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು.

ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಸಿರಿಗೆನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಪಂಚರತ್ನ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವನ್ನು ಜೆಡಿಎಸ್ ಕಾರ್ಯಕರ್ತರು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಹಾಸನ ಕ್ಷೇತ್ರದ ಅಭ್ಯರ್ಥಿಯೂ ಅಂತಿಮವಾಗಿದೆ. ನಮ್ಮ ಪಂಚರತ್ನ ರಥಯಾತ್ರೆ ಯಶಸ್ಸು ಎದುರಾಳಿಗಳಲ್ಲಿ ನಡುಕ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೋಲಾರದಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷದ ಸಿದ್ಧಾಂತಗಳು ಹಾಗೂ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ಜನಪರ ಕಾಳಜಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ : CRPF ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ : ‘ಮುಲಾಜಿಲ್ಲದೆ ಮರು ಪರೀಕ್ಷೆ ನಡೆಸಬೇಕು’ ಎಂದ ಕುಮಾರಸ್ವಾಮಿ

ಮಾಜಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಆನಂದರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎ.ವಿ ಶ್ರೀನಿವಾಸ್, ಎನ್.ಆರ್.ಎಸ್ ಸತ್ಯಣ್ಣ ಹಾಗೂ ಹಲವು ಮುಖಂಡರು ಸಮೃದ್ಧಿ ಮಂಜುನಾಥ್ ಹಾಗೂ ಕಾಡೇನಹಳ್ಳಿ ನಾಗರಾಜಣ್ಣ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ.

ಈ ಸಂದರ್ಭದಲ್ಲಿ ಕಾಡೇನಹಳ್ಳಿ ನಾಗರಾಜಣ್ಣ ಅಧ್ಯಕ್ಷತೆಯಲ್ಲಿ ಕುಮಾರಣ್ಣ, ಎಂಎಲ್ ಸಿ ಇಂಚರ ಗೋವಿಂದರಾಜು, ತಾಲ್ಲೂಕು ಮುಖಂಡರಾದ ಲಾಯರ್ ಕೆ.ವಿ.ಶಂಕರಪ್ಪ, ಆಲಂಗೂರು ಶಿವಣ್ಣ, ಶಾಮೇಗೌಡ, ರಘುಪತಿರೆಡ್ಡಿ, ಡಾಕ್ಟರ್ ಪ್ರಕಾಶ್, ಬಿ.ಎಂ.ಸಿ ವೆಂಕಟ್ರಾಮಣ್ಣ, ಲಾಯರ್ ಶ್ರೀನಿವಾಸರೆಡ್ಡಿ, ಟೌನ್ ಅಧ್ಯಕ್ಷ ತೇಜೋರಮಣ, ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments