Wednesday, January 22, 2025

ಮೋದಿ ‘ಹೀರೋ’ ಎಂದು ಕೊಂಡಾಡಿದ ಕೆವಿನ್ ಪೀಟರ್ಸನ್

ಬೆಂಗಳೂರು : ರಾಜ್ಯದ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಆದರ್ಶಪ್ರಾಯ ಹೀರೋ ಎಂದು ಬಣ್ಣಿಸಿದ್ದಾರೆ.

ಬಂಡೀಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ (ಜಾಲತಾಣದ ತಮ್ಮ ಖಾತೆ) ಹಂಚಿಕೊಂಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ಮೋದಿಯವರನ್ನು ಹೀರೋ ಎಂದು ಹಾಡಿ ಹೊಗಳಿದ್ದಾರೆ. ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಕಾಡು ಪ್ರಾಣಿಗಳನ್ನು ಪ್ರೀತಿಸುವ ವಿಶ್ವ ನಾಯಕ, ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಸಂತಸದಿಂದ ಸಮಯ ಕಳೆದಿದ್ದಾರೆ. ಅವರ ಕಳೆದ ವರ್ಷದ ಜನ್ಮದಿನದಂದು, ಅವರು ವಿದೇಶದ ಚಿರತೆಗಳನ್ನು ಭಾರತದ ಕಾಡಿಗೆ ತಂದು ಬಿಟ್ಟಿದ್ದರು. ಅವರು ಹೀರೋ ಎಂದು ಪೀಟರ್ಸನ್ ಕೊಂಡಾಡಿದ್ದಾರೆ.

ಇದನ್ನೂ ಓದಿ : ‘ಮಾರಾಟಗಾರ’ ಬಂದಿದ್ದಕ್ಕೆ ಹುಲಿಗಳು ಮುನಿಸಿಕೊಂಡಿವೆ : ಕಾಂಗ್ರೆಸ್ ವ್ಯಂಗ್ಯ

ಹಿಂದೆಯೂ ಹೊಗಳಿದ್ದ ಪೀಟರ್ಸನ್

ಈ ಹಿಂದೆ ಘೇಂಡಾಮೃಗಗಳ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎದ್ದು ನಿಂತಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಶ್ಲಾಘಿಸಿದ್ದರು. ಜೊತೆಗೆ, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.

ಒಂದು ಕೊಂಬಿನ ಘೇಂಡಾಮೃಗ ಭಾರತದ ಹೆಮ್ಮೆ ಮತ್ತು ಅದರ ಯೋಗಕ್ಷೇಮಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದ್ದರು. ಅವರನ್ನು “ಹೀರೋ” ಎಂದು ಬಣ್ಣಿಸಿದ ಕೆವಿನ್ ಪೀಟರ್ಸನ್, ಭಾರತದಲ್ಲಿ ಘೇಂಡಾಮೃಗಗಳ ಸಂಖ್ಯೆ ವೇಗವಾಗಿ ಏರಲು ಇದೇ ಕಾರಣ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES