ಬೆಂಗಳೂರು : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ನಾಳೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬಿಜೆಪಿ ಪಾರುಪಥ್ಯ ಹೊಂದಿರುವ ತುಮಕೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಅದರಂತೆ, ತುಮಕೂರು ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಜಿ.ಬಿ ಜ್ಯೋತಿ ಗಣೇಶ್ ಅವರ ತಂದೆ ಸಂಸದ ಜಿ.ಎಸ್ ಬಸವರಾಜ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ಬಾರಿ ತನ್ನ ಪುತ್ರನಿಗೆ ಟಿಕೆಟ್ ನೀಡಿವಂತೆ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ, ಬಿಜೆಪಿ ಹೈಕಮಾಂಡ್ ಬಸವರಾಜ್ ಬೇಡಿಕೆ ಪುರಸ್ಕರಿಸಿ, ಜ್ಯೋತಿಗಣೇಶ್ ಅವರಿಗೆ ಟಿಕೆಟ್ ನೀಡುವುದು ಪಕ್ಕಾ ಎನ್ನಲಾಗುತ್ತಿದೆ.
ಇನ್ನೂ ತುರುವೇಕೆರೆ ಕ್ಷೇತ್ರಕ್ಕೆ ಹಾಲಿ ಶಾಸಕ ಮಸಾಲ ಜಯರಾಂ, ತಿಪಟೂರು ಕ್ಷೇತ್ರಕ್ಕೆ ಸಚಿವ ಬಿ.ಸಿ.ನಾಗೇಶ್ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಜೆ.ಸಿಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್ : ಇವರೇ ತುಮಕೂರು ‘ಕೈ’ ಅಭ್ಯರ್ಥಿಗಳು
ಮೊದಲ ಪಟ್ಟಿಯಲ್ಲಿ ಇವರಿಗೆಲ್ಲಾ ಟಿಕೆಟ್
ತುಮಕೂರು ನಗರ-ಜಿ.ಬಿ ಜ್ಯೋತಿ ಗಣೇಶ್
ತುರುವೇಕೆರೆ-ಮಸಾಲ ಜಯರಾಂ
ತಿಪಟೂರು-ಬಿ.ಸಿ ನಾಗೇಶ್
ಚಿ.ನಾ. ಹಳ್ಳಿ-ಜೆ.ಸಿ ಮಾಧುಸ್ವಾಮಿ
ಶಿಗ್ಗಾಂವಿ-ಬಸವರಾಜ್ ಬೊಮ್ಮಾಯಿ
ಚಿಕ್ಕಮಗಳೂರು-ಸಿ.ಟಿ.ರವಿ
ಶೃಂಗೇರಿ-ಜೀವರಾಜ್
ಹಿರಿಯೂರು-ಕೆ.ಪೂರ್ಣಿಮಾ
ಮೊಳಕಾಲ್ಮೂರು-ತಿಪ್ಪೇಸ್ವಾಮಿ
ಹುಬ್ಬಳ್ಳಿ-ಧಾರವಾಡ -ಅರವಿಂದ ಬೆಲ್ಲದ್
ಮೊದಲಾದವರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಲಭಿಸಿದೆ ಎಂದು ಮೂಲಗಳನ್ನು ತಿಳಿಸಿವೆ.