Sunday, December 22, 2024

RCB ಅಭಿಮಾನಿಗಳೇ ಎಚ್ಚರ : ನಿಮ್ಮ ಬಳಿ ಇರುವ ಟಿಕೆಟ್ ಅಸಲಿಯೋ? ನಕಲಿಯೋ? ಪರಿಶೀಲಿಸಿ

ಬೆಂಗಳೂರು : ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ಕುಳಿತು ನೋಡಬೇಕು ಎಂಬುದು ಕ್ರಿಕೆಟ್ ಪ್ರೇಮಿಗಳ ಆಸೆ. ಹೀಗಾಗಿ, ಕೆಲವು ಅಭಿಮಾನಿಗಳು ದುಬಾರಿ ಹಣ ನೀಡಿ ಬ್ಲಾಕ್ ನಲ್ಲಿ ಟಿಕೆಟ್ ಕೊಳ್ಳುತ್ತಾರೆ. ಅಂಥವರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಆರ್ ಸಿಬಿ ಅಭಿಮಾನಿಗಳು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯ ವೀಕ್ಷಣೆಗೆ ದುಬಾರಿ ಹಣ ನೀಡಿ ಟಿಕೆಟ್ ಕೊಳ್ಳುತ್ತಿದ್ದಾರೆ.  ಬೆಂಗಳೂರಿನಲ್ಲಿ ನಕಲಿ ಟಿಕೆಟ್ ದಂಧೆ ಬೆಳಕಿಗೆ ಬಂದಿದೆ.

ಒಂದು ಅಸಲಿ ಟಿಕೆಟ್ ಅನ್ನು ಕಿಡಿಗೇಡಿಗಳು ಕಲ್ ಪ್ರಿಂಟ್ ತೆಗೆದು ಅದನ್ನೇ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೇ ರೀತಿ 20ಕ್ಕೂ ಹೆಚ್ಚು ಟಿಕೆಟ್ ಗಳನ್ನು ಪ್ರಿಂಟ್ ತೆಗೆದಿದ್ದಾರೆ ಎನ್ನಲಾಗಿದ್ದು, ಆರ್ ಸಿಬಿ ಅಭಿಮಾನಿಗಳು ಟಿಕೆಟ್ ಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಇಂದು ಮ್ಯಾಚ್ ನಡೆಯುತ್ತಾ?

ಆರ್ ಸಿಬಿ ಹಾಗೂ ಲಕ್ನೋ ನಡುವೆ ಇಂದು ನಡೆಯುವ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆಯ ಭೀತಿ ಕಾಡುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಇಂದಿನ ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : 6,6,6,6,6 ಕೆಕೆಆರ್ ಗೆ ರೋಚಕ ಜಯ

ಆರ್ ಸಿಬಿ ಸಂಭಾವ್ಯ ತಂಡ

ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್.

ಲಕ್ನೋ ಸಂಭಾವ್ಯ ತಂಡ

ಕೆ.ಎಲ್. ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್

RELATED ARTICLES

Related Articles

TRENDING ARTICLES