ಬೆಂಗಳೂರು : ಚುನಾವಣೆ ದಿನಾಂಕ ಘೋಷಣೆಯಾದರೂ ಇನ್ನೂ ಕಗ್ಗಂಟಾಗಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಇಂದು ಕೌಂಟ್ಡೌನ್ ಶುರುವಾಗಿದೆ.ಕೇಸರಿ ಪಡೆಯು ಮ್ಯಾರಥಾನ್ ಮೀಟಿಂಗ್ ಮಾಡಿ ಬಿಜೆಪಿ ಪಟ್ಟಿ ಫೈನಲ್ ಮಾಡಲಿದ್ದು, 150 ರಿಂದ 170 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನೂ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಫೈನಲ್ ಮಾಡಲಿದ್ದು, ಈ ಬಾರಿ ಬಿಜೆಪಿಯ 25 ಹಾಲಿ ಶಾಸಕರು ಹಾಗೂ ಸಚಿವರಿಗೆ ಟಿಕೆಟ್ ಮಿಸ್ ಆಗಲಿದೆ ಹೈಕಮಾಂಡ್ ಶಾಕ್ ನೀಡಲಿದೆ.
ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಬಗ್ಗೆ ಬಿಗ್ ಅಪ್ಡೇಟ್ : ಬೊಮ್ಮಾಯಿ ಹೇಳಿದ್ದೇನು?
ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಗೆ ಕೆಲ ಕೇಸರಿ ಕಲಿಗಳಿಗೆ ನಡುಕ ಹುಟ್ಟಿದೆ. ಪಕ್ಷ ನಿಷ್ಠವಲ್ಲದ, ಭ್ರಷ್ಟಾಚಾರದಲ್ಲಿ ಹೆಸರು ತಳಕು ಹಾಕಿಕೊಂಡ, ವಯಸ್ಸಿನ ಕಾರಣ, ವರ್ಚಸ್ಸು ಕಳೆದುಕೊಂಡಿರುವ, ಆಡಳಿತ ವಿರೋಧಿ ಅಲೆ ಹಾಗೂ ಇನ್ನಿತರ ಕಾರಣಗಳಿಂದ ಕೆಲವು ಹಾಲಿ ಶಾಸಕರು ಹಾಗೂ ಸಚಿವರಿಗೆ ಗೇಟ್ ಪಾಸ್ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.
ಯಾರಿಗೆಲ್ಲಾ ಟಿಕೆಟ್ ಸಿಗೋದು ಡೌಟ್..? ಕಾರಣವೇನು?
ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ – ಭ್ರಷ್ಟಾಚಾರ ಆರೋಪ
ಹಾವೇರಿ – ನೆಹರೂ ಓಲೆಕಾರ್ – ಅನುದಾನ ದುರ್ಬಳಕೆ ಆರೋಪ
ಮೂಡಿಗೆರೆ – ಎಂ.ಪಿ.ಕುಮಾರಸ್ವಾಮಿ – ವರ್ಚಸ್ಸು ಕುಗ್ಗಿರುವುದು
ರಾಜಾಜಿನಗರ – ಸುರೇಶ್ ಕುಮಾರ್ – ವಯಸ್ಸು, ಕಳೆಗುಂದಿದ ವರ್ಚಸ್ಸು
ಚಿತ್ರದುರ್ಗ – ತಿಪ್ಪಾರೆಡ್ಡಿ – ವಯಸ್ಸು, ವರ್ಚಸ್ಸು ಕಳೆದುಕೊಂಡಿರೋದು
ಯಾದಗಿರಿ – ವೆಂಕಟರೆಡ್ಡಿ – ಆಡಳಿತ ವಿರೋಧಿ ಅಲೆ, ಕುಸಿದ ಜನ ಬೆಂಬಲ
ಕನಕಗಿರಿ – ಬಸವರಾಜ ದಡೇಸುಗೂರು – ಆಡಳಿತ ವಿರೋಧಿ ಅಲೆ, ಕುಗ್ಗಿದ ವರ್ಚಸ್ಸು
ಶಿವಮೊಗ್ಗ ನಗರ – ಈಶ್ವರಪ್ಪ – ಕಮಿಷನ್ ಆರೋಪ, ಸಂತೋಷ್ ಪಾಟೀಲ್ ಆತ್ಮಹತ್ಯೆ
ಅಥಣಿ – ಮಹೇಶ್ ಕುಮಟಳ್ಳಿ – ಒಳ ರಾಜಕೀಯ, ಸವದಿ-ಟಿಕೆಟ್ ಫೈಟ್
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್ – ಆಡಳಿತ ವಿರೋಧಿ ಅಲೆ
ರಾಯಚೂರು ನಗರ – ಡಾ.ಶಿವರಾಜ್ ಪಾಟೀಲ್ – ಪಕ್ಷ ನಿಷ್ಠೆಯಿಲ್ಲದಿರೋದು
ಪುತ್ತೂರು ಕ್ಷೇತ್ರ – ಸಂಜೀವ್ ಮಠಂದೂರು – ಆಡಳಿತ ವಿರೋಧಿ ಅಲೆ
ಉಡುಪಿ – ರಘುಪತಿ ಭಟ್ – ಆಡಳಿತ ವಿರೋಧಿ ಅಲೆ, ಕುಗ್ಗಿದ ವರ್ಚಸ್ಸು
ಕಾಪು – ಲಾಲಾಜಿ ಮೆಂಡನ್ – ಆಡಳಿತ ವಿರೋಧಿ ಅಲೆ, ಸುರೇಶ್ ಶೆಟ್ಟಿ ಪರ ಒಲವು
ಸೊರಬ – ಕುಮಾರ್ ಬಂಗಾರಪ್ಪ – ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ
ಆಳಂದ – ಸುಭಾಷ್ ಗುತ್ತೇದಾರ್ – ಆಡಳಿತ ವಿರೋಧಿ ಅಲೆ, ಕುಗ್ಗಿದ ವರ್ಚಸ್ಸು
ಹೊಸದುರ್ಗ – ಗೂಳಿಹಟ್ಟಿ ಶೇಖರ್ – ಪಕ್ಷ ನಿಷ್ಠೆಯಿಲ್ಲದಿರೋದು, ಅಭಿವೃದ್ಧಿ ಶೂನ್ಯ
ಧಾರವಾಡ – ಅಮೃತ ದೇಸಾಯಿ – ಆಡಳಿತ ವಿರೋಧಿ ಅಲೆ, ಪಕ್ಷ ನಿಷ್ಠೆ ಕೊರತೆ
ದಾವಣಗೆರೆ ಉತ್ತರ – ಎಸ್.ಎ.ರವೀಂದ್ರನಾಥ್ – ವಯಸ್ಸಿನ ಕಾರಣ
ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್ – ವಯಸ್ಸಿನ ಕಾರಣ
ಬಸವನಗುಡಿ – ರವಿ ಸುಬ್ರಹ್ಮಣ್ಯ – ಹೊಸ ಮುಖಕ್ಕೆ ಮಣೆ ಹಾಕಲು ಪ್ಲ್ಯಾನ್
ಚಿಕ್ಕಪೇಟೆ – ಉದಯ್ ಗರುಡಾಚಾರ್ – ಕುಗ್ಗಿದ ವರ್ಚಸ್ಸು, ಪಕ್ಷ ನಿಷ್ಠೆ ಕೊರತೆ
ವಿರಾಜಪೇಟೆ – ಕೆ.ಜಿ.ಬೋಪಯ್ಯ – ವಯಸ್ಸಿನ ಕಾರಣ
ಸುಳ್ಯ – ಅಂಗಾರ – ವಯಸ್ಸಿನ ಕಾರಣ, ಹೊಸ ಮುಖಕ್ಕೆ ಮಣೆ
ಯಲಬುರ್ಗಾ – ಹಾಲಪ್ಪ ಆಚಾರ್ – ವಯಸ್ಸಿನ ಕಾರಣ, ಅಭಿವೃದ್ಧಿ ಕೊರತೆ
ಮುಧೋಳ – ಗೋವಿಂದ ಕಾರಜೋಳ, ವಯಸ್ಸಿನ ಕಾರಣ