ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಫೈನಲ್ ಮಾಡಲಿದ್ದು, ಈ ಬಾರಿ ಬಿಜೆಪಿಯ 25 ಹಾಲಿ ಶಾಸಕರು ಹಾಗೂ ಸಚಿವರಿಗೆ ಟಿಕೆಟ್ ಮಿಸ್ ಆಗಲಿದೆ ಎಂದು ತಿಳಿದುಬಂದಿದೆ.
ಹೌದು, ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಗೆ ಕೆಲ ಕೇಸರಿ ಕಲಿಗಳಿಗೆ ನಡುಕ ಹುಟ್ಟಿದೆ. ಪಕ್ಷ ನಿಷ್ಠವಲ್ಲದ, ಭ್ರಷ್ಟಾಚಾರದಲ್ಲಿ ಹೆಸರು ತಳಕು ಹಾಕಿಕೊಂಡ, ವಯಸ್ಸಿನ ಕಾರಣ, ವರ್ಚಸ್ಸು ಕಳೆದುಕೊಂಡಿರುವ, ಆಡಳಿತ ವಿರೋಧಿ ಅಲೆ ಹಾಗೂ ಇನ್ನಿತರ ಕಾರಣಗಳಿಂದ ಕೆಲವು ಹಾಲಿ ಶಾಸಕರು ಹಾಗೂ ಸಚಿವರಿಗೆ ಗೇಟ್ ಪಾಸ್ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿನಲ್ಲಿರುವ ಚನ್ನಗಿರಿ ಕ್ಷೇತ್ರದ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ, ಸೊರಬಾ ಕ್ಷೇತ್ರದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡದೇ ಇರಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಎಸ್.ಸುರೇಶ್ ಕುಮಾರ್, ಶಾಸಕ ರವಿಸುಬ್ರಹ್ಮಣ್ಯ ಅವರಿಗೂ ಟಿಕೆಟ್ ತಪ್ಪುವ ಭೀತಿ ಎದುರಾಗಿದೆ ಎಂದು ತಿಳಿದು ಬಂದಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜಿ.ಎಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್ ಅವರಿಗೂ ಈ ಬಾರಿ ಬಿಜೆಪಿಯಿಂದ ಟಿಕೆಟ್ ಮಿಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಗನಿಗೆ ಟಿಕೆಟ್ ಕೊಡಿಸಲು ವಿ ಸೋಮಣ್ಣ ಸರ್ಕಸ್
ಯಾರಿಗೆಲ್ಲಾ ಟಿಕೆಟ್ ಸಿಗೋದು ಡೌಟ್?
- ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ
- ಹಾವೇರಿ-ನೆಹರೂ ಓಲೆಕಾರ್
- ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ
- ರಾಜಾಜಿನಗರ-ಸುರೇಶ್ ಕುಮಾರ್
- ಚಿತ್ರದುರ್ಗ-ಜಿ.ಎಚ್.ತಿಪ್ಪಾರೆಡ್ಡಿ
- ಯಾದಗಿರಿ-ವೆಂಕಟರೆಡ್ಡಿ ಮುದ್ನಾಳ್
- ಕನಕಗಿರಿ-ಬಸವರಾಜ ದಡೇಸುಗೂರು
- ಶಿವಮೊಗ್ಗ-ಕೆ.ಎಸ್.ಈಶ್ವರಪ್ಪ
- ಅಥಣಿ-ಮಹೇಶ್ ಕುಮಟಳ್ಳಿ
- ರಾಣೇಬೆನ್ನೂರು-ಅರುಣ್ ಕುಮಾರ್
- ರಾಯಚೂರು ನಗರ-ಡಾ.ಶಿವರಾಜ್ ಪಾಟೀಲ್
- ಪುತ್ತೂರು-ಸಂಜೀವ್ ಮಠಂದೂರು
- ಉಡುಪಿ-ರಘುಪತಿ ಭಟ್
- ಭಟ್ಕಳ-ಸುನೀಲ್ ನಾಯ್ಕ
- ಕಾಪು-ಲಾಲಾಜಿ ಮೆಂಡನ್
- ಸೊರಬ-ಕುಮಾರ್ ಬಂಗಾರಪ್ಪ
- ಆಳಂದ-ಸುಭಾಷ್ ಗುತ್ತೇದಾರ್
- ಹೊಸದುರ್ಗ-ಗೂಳಿಹಟ್ಟಿ ಶೇಖರ್
- ಧಾರವಾಡ-ಅಮೃತ ದೇಸಾಯಿ
- ದಾವಣಗೆರೆ ಉತ್ತರ-ಎಸ್.ಎ.ರವೀಂದ್ರನಾಥ್
- ಧಾರವಾಡ ಸೆಂಟ್ರಲ್-ಜಗದೀಶ್ ಶೆಟ್ಟರ್
- ಬಸವನಗುಡಿ-ರವಿ ಸುಬ್ರಹ್ಮಣ್ಯ
- ಚಿಕ್ಕಪೇಟೆ-ಉದಯ್ ಗರುಡಾಚಾರ್
- ವಿರಾಜಪೇಟೆ-ಕೆ.ಜಿ.ಬೋಪಯ್ಯ
- ಸುಳ್ಯ-ಅಂಗಾರ