Monday, December 23, 2024

6,6,6,6,6 ಕೆಕೆಆರ್ ಗೆ ರೋಚಕ ಜಯ

ಬೆಂಗಳೂರು : ಇಂದು ನಡೆದ ಐಪಿಎಲ್ ರೋಚಕ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಜಯ ದಾಖಲಿಸಿದೆ.

ಕೊನೆಯ ಓವರ್ ನಲ್ಲಿ 29 ರನ್ ಅಗತ್ಯವಿದ್ದಾಗ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಸತತ ಐದು ಸಿಕ್ಸರ್ ಸಿಡಿಸಿ ವಿದ್ವಂಸಕ ಬ್ಯಾಟಿಂಗ್ ನಡೆಸಿದರು.ಈ ಮೂಲಕ ಕೆಕೆಆರ್ ತಂಡ 3 ವಿಕೆಟ್ ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಗುಜರಾತ್ ಪರ ವಿಜಯ್ ಶಂಕರ್ 63, ಸುದರ್ಶನ್ 53, ಗಿಲ್ 39 ರನ್ ಗಳಿಸಿ ಮಿಂಚಿದರು. ಕೆಕೆಆರ್ ಪರ ನರೈನ್ 3 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಒಂದೇ ದಿನ, ಮೂವರ ಪಾಲಾದ ‘ಆರೆಂಜ್ ಕ್ಯಾಪ್’ 

ರಿಂಕು ಸಿಂಗ್ ಸ್ಫೋಟಕ ಬ್ಯಾಂಟಿಗ್

205 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಗೆ ಸ್ಟಾರ್ ಬ್ಯಾಟರ್ ಗಳು ಕೈ ಕೊಟ್ಟರು. ಒಂದು ಹಂತದಲ್ಲಿ ಪಂದ್ಯ ಕೈಚೆಲ್ಲಿ ಹೋಯಿತು ಎಂದು ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ರಿಂಕು ಸಿಂಗ್ ಆರ್ಭಟ ಸರ್ಪ್ರೈಸ್ ನೀಡಿದ್ದಂತೂ ಸುಳ್ಳಲ್ಲ. ಸ್ಫೋಟಕ ಬ್ಯಾಂಟಿಗ್ ನಡೆಸಿದ ರಿಂಕು ಸಿಂಗ್ 21 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ 29 ರನ್ ಬೇಕಿದ್ದಾಗ ಐದು ಬಾಲ್ ಗಳನ್ನು ಬೌಂಡರಿಗಟ್ಟಿದರು.

ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 83, ರಿಂಕು ಸಿಂಗ್ ಅಜೇಯ 48, ನಾಯಕ ನಿತೀಶ್ ರಾಣ 45 ರನ್ ಗಳಿಸಿದರು. ಗುಜರಾತ್ ಪರ ರಶಿದ್ ಖಾನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದರೆ, ಜೋಸೆಫ್ 2, ಮೊಹಮ್ಮದ್ ಶಮಿ ವಿಕೆಟ್ ಪಡೆದರು.

ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ರೋಚಕ ಅಂತ್ಯ ಕಂಡ ಪಂದ್ಯಕ್ಕೆ ಅಹ್ಮದಾಬಾದ್ ಕ್ರೀಡಾಂಗಣ ಸಾಕ್ಷಿಯಾಯಿತು. ರಿಂಕು ಸಿಂಗ್ ಆರ್ಭಟಕ್ಕೆ ಕ್ರಿಕೆಟ್ ಅಭಿಮಾನಿಗಳು ಬಹುಪರಾಕ್ ಹೇಳುತ್ತಿದ್ದಾರೆ.

RELATED ARTICLES

Related Articles

TRENDING ARTICLES