Monday, December 23, 2024

ಸಫಾರಿ ಉಡುಗೆ ತೊಟ್ಟು ಬಂಡೀಪುರಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ 

ಮೈಸೂರು : ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಿಂದ ಮುಂಜಾನೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡೀಪುರಕ್ಕೆ ತೆರಳಿದ್ದು, ಬಂಡೀಪುರ ಅರಣ್ಯವನ್ನ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು (Bandipur National Park) ಘೋಷಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಬಂಡೀಪುರಕ್ಕೆ ಸಫಾರಿ ಗೆಟಪ್​ನಲ್ಲಿ ಎಂಟ್ರಿ ನೀಡಿದ್ದಾರೆ. ಈ ವೇಳೆ ಅವರು ಎರಡು ಗಂಟೆಗಳ ಕಾಲ ಸಫಾರಿ ಮಾಡಲಿದ್ದು, ಅದಕ್ಕೋಸ್ಕರ ಸಫಾರಿ ಉಡುಗೆ ತೊಟ್ಟಿದ್ದಾರೆ.

 ಪ್ರಧಾನಿ ಮೋದಿ ಶೆಡ್ಯೂಲ್

* ಮೇಲುಕಾಮನ ಹಳ್ಳಿ ಸಫಾರಿ ಕೌಂಟರ್‌ನಿಂದ ಸಫಾರಿ ಆರಂಭ

* 2 ಗಂಟೆಗಳ ಕಾಲ ಪ್ರಧಾನಿ ಮೋದಿ ಸಫಾರಿ

* ಕೇವಲ 5 ವಾಹನಗಳಿಗೆ ಮಾತ್ರ ಸಫಾರಿ ಅವಕಾಶ

* ವೀವ್ಯೂ ಪಾಯಿಂಟ್ ಮತ್ತು ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ

* ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ವಾಪಸ್

 

 

 

RELATED ARTICLES

Related Articles

TRENDING ARTICLES