Wednesday, January 22, 2025

ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ : 20 ಕಿ.ಮೀ.ವರೆಗೆ ಸಫಾರಿ

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ಆಗಮಿಸಿದ್ದಾರೆ. ಮೈಸೂರಿನ ಹೆಲಿಪ್ಯಾಡ್‌ನಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಮೋದಿ ಬಂದಿಳಿದಿದ್ದು, ರಸ್ತೆ ಮಾರ್ಗವಾಗಿ ಬಂಡೀಪುರ ಕ್ಯಾಂಪ್‌ಗೆ ಪ್ರಧಾನಿ ಹೊರಟಿದ್ದಾರೆ. 2 ಗಂಟೆಗಳ ಕಾಲ ಸುಮಾರು 20 ಕಿ.ಮೀ.ವರೆಗೆ ಸಫಾರಿ ನಡೆಸಲಿದ್ದಾರೆ.

ಗಡಿಭಾಗದ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಮೂಲಕ ತಮಿಳುನಾಡಿನ ಮಧುಮಲೈ ಅರಣ್ಯಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ.

ಸಫಾರಿ ಡ್ರೆಸ್‌ನಲ್ಲಿ ಮೋದಿ ಮಿಂಚು

ಬಂಡೀಪುರ ಉದ್ಯಾನದ ಸಫಾರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಲುಕ್‌ನಲ್ಲಿ ಕಾಣಿಸಿದ್ದಾರೆ. ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ನಮೋ, ಸಫಾರಿ ಡ್ರೆಸ್‌ನಲ್ಲಿ ಮಿಂಚಿದರು.

 

ಖಾಕಿ ಬಣ್ಣದ ಟೀ-ಶರ್ಟ್ ಹಾಗೂ ಪ್ಯಾಂಟ್ ಧರಿಸಿರುವ ಮೋದಿ ಅವರು, ಕಪ್ಪು ಟೋಪಿ ಮತ್ತು ಕಪ್ಪು ಬೂಟುಗಳನ್ನು ಸಹ ಧರಿಸಿದ್ದಾರೆ. ಫೋಟೋದಲ್ಲಿ, ಪ್ರಧಾನಿ ಕೈಯಲ್ಲಿ ಅರ್ಧ ಜಾಕೆಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES