Wednesday, January 22, 2025

‘ಮಾರಾಟಗಾರ’ ಬಂದಿದ್ದಕ್ಕೆ ಹುಲಿಗಳು ಮುನಿಸಿಕೊಂಡಿವೆ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬಂಡಿಪುರಕ್ಕೆ ಭೇಟಿ ನೀಡಿದ್ದು, ಸಫಾರಿಯಲ್ಲಿ ಭಾಗಿಯಾಗಿದ್ದರು. ಆದರೆ, ಹುಲಿಗಳು ಕಂಡಿರಲಿಲ್ಲ. ಹೀಗಾಗಿ, ರಾಜ್ಯ ಕಾಂಗ್ರೆಸ್ ಮೋದಿ ಅವರನ್ನು ಮಾರಾಟಗಾರ ಎಂದು ವ್ಯಂಗ್ಯವಾಡಿದ್ದಾರೆ.

ಹೌದು, ಮಾರಾಟಗಾರ ಬಂದಿದ್ದಕ್ಕೆ ಹುಲಿಗಳು ಹೆದರಿ ಕಾಡು ಬಿಟ್ಟವೇ ಅಥವಾ ಹುಲಿಗಳನ್ನೆಲ್ಲಾ ಮಾರಾಟ ಮಾಡಿಯಾಗಿದೆಯೇ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಕೈಗೊಂಡಿದ್ದಾಗ ಹುಲಿಗಳು ಕಾಣಿಸಿಲ್ಲ ಎಂಬ ಸುದ್ದಿಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಪ್ರಾಜೆಕ್ಟ್ ಟೈಗರ್ ಯೋಜನೆಗೆ ಶೂನ್ಯ ಕೊಡುಗೆ ನೀಡಿದ ನರೇಂದ್ರ ಮೋದಿಯವರು, ಈಗ ಫೋಟೋಶೂಟ್ ಮಾಡಿಸಿಕೊಳ್ಳಲು ಬಂದಿದ್ದಕ್ಕೆ ಹುಲಿಗಳು ಮುನಿಸಿಕೊಂಡಿರಬಹುದು ಎಂದು ಲೇವಡಿ ಮಾಡಿದೆ.

ಇದನ್ನೂ ಓದಿ: ಮೋದಿ ರಾಜ್ಯಕ್ಕೆ ಬರುವುದು ರೆಸ್ಟ್ ಮಾಡಲು : ಕುಮಾರಸ್ವಾಮಿ ಲೇವಡಿ

ಖಾಲಿ ರಸ್ತೆಗೆ ಕೈಬೀಸಿದ ಮೋದಿ

ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಜನರಿಲ್ಲದ ಖಾಲಿ ರಸ್ತೆಗೆ ಕೈಬೀಸುವ ಖಯಾಲಿ ಹೊಂದಿರುವ ಪ್ರಧಾನಿ ಮೋದಿ ನೋಡಲು ಜನರು ಮನೆಯಿಂದ ಹೊರಬಂದಿಲ್ಲವಂತೆ. ಎಂತಹ ನಾಚಿಕೆಗೇಡಿನ ಸಂಗತಿ! ಎಂದು ಕುಟುಕಿದೆ.

ಪ್ರಧಾನಿ ನರೇಂದ್ರ ಮೋದಿ ಬಂದು ಕೈಬೀಸಿ ಹೋದಾಗಲೆಲ್ಲ ಕನ್ನಡಿಗರಿಗೆ ಒಂದೊಂದು ಗಂಡಾಂತರ ಎದುರಾಗಿದೆ, ಹೀಗಿರುವಾಗ ಜನ ಬರುವರೇ? ಬಿಜೆಪಿ ನಾಯಕರೇ, ಮೋದಿ ಎಂದರೆ ಜನತೆಗೆ ಭಯ ಬಂದಿದೆಯೇ ಅಥವಾ ಆಕ್ರೋಶ ಹುಟ್ಟಿದೆಯೇ? ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES