Monday, August 25, 2025
Google search engine
HomeUncategorized'ಧೋನಿ ಆರ್ಭಟಿಸಲಿ, ಆದ್ರೆ, ಮುಂಬೈ ಗೆಲ್ಲಲಿ' : ಇದು ಮುಂಬೈ ಪ್ಯಾನ್ಸ್ ಹಂಬಲ್ ರಿಕ್ವೆಸ್ಟ್

‘ಧೋನಿ ಆರ್ಭಟಿಸಲಿ, ಆದ್ರೆ, ಮುಂಬೈ ಗೆಲ್ಲಲಿ’ : ಇದು ಮುಂಬೈ ಪ್ಯಾನ್ಸ್ ಹಂಬಲ್ ರಿಕ್ವೆಸ್ಟ್

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ.. ಪ್ರತಿಯೊಬ್ಬ ಕ್ರೀಡಾಭಿಮಾನಿಯೂ ಇಷ್ಟಪಡುವ ಕ್ರಿಕೆಟಿಗ. ತನ್ನ ನಿರ್ಧಾರ, ತನ್ನ ವ್ಯಕ್ತಿತ್ವ ಹಾಗೂ ಶಾಂತಚಿತ್ತದಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಆಟಗಾರ. ಹೀಗಾಗಿಯೇ ತಲಾ ಧೋನಿ ಮೈದಾನಕ್ಕಿಳಿದರೆ ಪ್ಯಾನ್ಸ್ ಜೈಕಾರ, ಶಿಳ್ಳೆ, ಚಪ್ಪಾಳೆ ಸದ್ದು ಜೋರಾಗಿಯೇ ಇರುತ್ತದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮವಾಗಿ ಆಡುವ ಮೂಲಕ ಮನರಂಜನೆ ನೀಡಬೇಕು. ಆದ್ರೆ, ಮುಂಬೈ ಗೆಲ್ಲಬೇಕು ಎಂದು ಮುಂಬೈ ಫ್ಯಾನ್ಸ್ ಬಯಸುತ್ತಿದ್ದಾರೆ.

ಈ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ಮುಂಬೈ ವಿರುದ್ಧ ಅಬ್ಬರಿಸಬೇಕು. ಆದರೆ, ಅಂತಿಮವಾಗಿ ಮುಂಬೈ ತಂಡವೇ ಗೆಲ್ಲಬೇಕು ಎಂದು ಅಭಿಮಾನಿಗಳು ಕೋರುತ್ತಿದ್ದಾರೆ ಎಂದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತವರು (ಹೋಮ್ ಗ್ರೌಂಡ್) ಕ್ರೀಡಾಂಗಣದಲ್ಲಿ ಮುಂಬೈನ ಶಕ್ತಿ ದ್ವಿಗುಣಗೊಳ್ಳಲಿದೆ. ಆದರೆ, ಚೆನ್ನೈ ತಂಡವನ್ನು ಸೋಲಿಸಲು ಶ್ರಮಪಡಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಸಂಭ್ರಮವೋ.. ಸಂಭ್ರಮ

ಇಂದು ಡಬಲ್ ಧಮಾಕಾ

ಐಪಿಎಲ್ ನಲ್ಲಿ ಇಂದು ಕ್ರಿಕೆಟ್ ಅಭಿಮಾನಿಗಳಿಗೆ ವೀಕೆಂಡ್ ಡಬಲ್ ಧಮಾಕಾ. ಇಂದು 2 ಪಂದ್ಯಗಳು ನಡೆಯಲಿದ್ದು, ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ರಾಜಸ್ಥಾನ ತನ್ನ 2ನೇ ಪಂದ್ಯ ಸೋತಿದ್ದರೆ, ಡೆಲ್ಲಿ ಎರಡೂ ಪಂದ್ಯವನ್ನೂ ಸೋತಿದೆ. ಈಗಾಗಲೇ ಟಾಸ್ ಗೆದ್ದಿರುವ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ, ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ಥಾನ ಡೆಲ್ಲಿ ಬೌಲರ್ ಗಳ ದಾಳಿಯನ್ನು ಉಡೀಸ್ ಮಾಡುತ್ತಿದೆ.

ಮುಂಬೈ ಚೆನ್ನೈ ಸೆಣಸು

ಮತ್ತೊಂದು ಪಂದ್ಯದಲ್ಲಿ ಮುಂಬೈ ತಮಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ವಾಂಖೆಡೆಯಲ್ಲಿ ಮಾಜಿ ಚಾಂಪಿಯನ್‌ಗಳ ನಡುವೆ ಪ್ರತಿಷ್ಠೆಯ ಫೈಟ್ ನಡೆಯಲಿದೆ. ಚೆನ್ನೈ ಎರಡಲ್ಲಿ ಒಂದು ಪಂದ್ಯ ಗೆದ್ದಿದ್ದರೆ ಮುಂಬೈ ಮೊದಲ ಪಂದ್ಯದಲ್ಲಿ ಸೋತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments