ಬೆಂಗಳೂರು : ಜೆಡಿಎಸ್ ಪಕ್ಷವನ್ನು ಮುಳುಗಿಸಲು ಶಾಸಕರನ್ನು ಕರೆದೊಯ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರು ಜೆಡಿಎಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದ ಕೃತಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಎಂಎಲ್ ಸಿ ರಘು ಆಚಾರ್ ಸಹ ಜೆಡಿಎಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್ ಶಾಸಕರನ್ನೇ ರಾಜೀನಾಮೆ ಕೊಡಿಸಿ ತುಂಬಿಕೊಂಡು ಹೋಗಿದ್ದರು. ಈಗ ಹಲವಾರು ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವುದು ಪ್ರಾರಂಭ ಆಗಿದೆ. ಕಾಂಗ್ರೆಸ್ ಹಲವರು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವ ಪ್ರಕ್ರಿಯೆ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಅಂದ್ರೆ ಕನ್ನಡಕ್ಕೆ ‘ಕಂಟಕ ರವಿ’ : ಕಾಂಗ್ರೆಸ್ ಲೇವಡಿ
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸೋಮವಾರದ ನಂತರ ಪಟ್ಟಿ ಬಿಡುಗಡೆ ಮಾಡುತ್ತೇನೆ. ಈಗ ಸಾಕಷ್ಟು ಒತ್ತಡಗಳು ಇದೆ. ಕೆಲವು ಕಡೆ ರೀ ಅಲಾನ್ಮೆಂಟ್ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಮತದಾರರು ನನಗೆ ಮತ ಹಾಕಲು ರೆಡಿ ಇದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆ ಇದೆ. ಆ ಕೊರತೆ ನೀಗಿಸುವ ಕೆಲಸ ಆಗ್ತಾ ಇದೆ. ರಾಷ್ಟ್ರೀಯ ಪಕ್ಷ ಮೊದಲ ಪಟ್ಟಿಯೇ ಬಿಡುಗಡೆ ಆಗಿಲ್ಲ. ಪ್ರಪಂಚ ಏನ್ ಮುಳುಗಿ ಹೋಗಲ್ಲ ಎಂದು ಹೇಳಿದ್ದಾರೆ.