Sunday, December 22, 2024

ಭವಾನಿಗೆ ಟಿಕೆಟ್ ಮಿಸ್ ಆದ್ರೆ, ಭಂಡಾಯ ಸ್ಪರ್ಧೆ : HDKಗೆ ವಾರ್ನಿಂಗ್ ಕೊಟ್ರಾ ರೇವಣ್ಣ

ಬೆಂಗಳೂರು : ಹಾಸನ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಒಪ್ಪದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಶಾಕ್​ ನೀಡಿದ್ದಾರೆ.

ಹೌದು, ಭವಾನಿಗೆ ಹಾಸನ ಟಿಕೆಟ್ ಕೊಡದಿದ್ದರೆ ಹೊಳೆನರಸೀಪುರದಲ್ಲಿ ತಾವು ಹಾಗೂ ಹಾಸನದಿಂದ ಭವಾನಿ ಭಂಡಾಯವಾಗಿ ನಿಲ್ಲೋ ನೇರ ಎಚ್ಚರಿಕೆಯನ್ನು ರೇವಣ್ಣ ರವಾನಿಸಿದ್ದಾರೆ. ತಮ್ಮ ಆಪ್ತರು ಹಾಗೂ ಕುಟುಂಬ ಸದಸ್ಯರ ಮೂಲಕ ಗೌಡರಿಗೆ ತಮ್ಮ ನಿಲುವನ್ನು ರೇವಣ್ಣ ತಿಳಿಸಿದ್ದಾರೆ ಎನ್ನಲಾಗಿದೆ.

ರೇವಣ್ಣ ಹೊಸ ತಂತ್ರ

ಎಂಥದ್ದೇ ಸಂದರ್ಭ ಬಂದರೂ ಕೂಡ ತಮ್ಮ ಜೊತೆ ನಿಲ್ಲೋದಾಗಿ ಆಪ್ತರ ಬೆಂಬಲವಿರುವ ಹಿನ್ನೆಲೆಯಲ್ಲಿ ರೇವಣ್ಣಗೆ ಬಲ ಬಂದಿದೆ. ಕುಮಾರಸ್ವಾಮಿ ಛಲ ಬಿಡದ ನಿಲುವಿನ ನಡುವೆ ಕೂಡ ಹಾಸನ ಟಿಕೆಟ್ ಪಡೆಯಲು ರೇವಣ್ಣ ತಂತ್ರ ರೂಪಿಸಿದ್ದಾರೆ. ಪತ್ನಿಗೆ ಟಿಕೆಟ್ ಕೊಡದಿದ್ದರೆ ತಮಗೂ ಬೇಡ ಎಂದು ರೇವಣ್ಣ ನೇರ ಎಚ್ಚರಿಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನಂದಿನಿ ಮುಗಿಸಲು ಬಿಜೆಪಿ 3ನೇ ಸಂಚು : ಕುಮಾರಸ್ವಾಮಿ ಕಿಡಿ

ಹಠ ಬಿಡದ ಕುಮಾರಣ್ಣ, ರೇವಣ್ಣ

ಹಾಸನದ ಈ ಟಿಕಟ್ ಹೈಡ್ರಾಮ ದೊಡ್ಡಗೌಡರ ಕುಟುಂಬದಲ್ಲಿ ಸುಲಭವಾಗಿ ಬಗೆಹರಿಯಬಹುದಾಗಿದ್ದ ವಿಚಾರ. ಆದ್ರೆ, ಎರಡು ಕಡೆಯಿಂದ ಹಠ ಬಿಡದ ಹೊರಾಟದ ಕಾರಣದಿಂದ ಇದೀಗ ಕಗ್ಗಂಟಾಗಿ ಬದಲಾಗಿದೆ. ಇದು ಯಾವ ಹಂತಕ್ಕೆ ಬೇಕಿದ್ರು ಹೋಗಬಹುದು ಎಂಬ ರಾಜಕೀಯ ಚರ್ಚೆ ಶುರುವಾಗಿದೆ.

ಅಂತಿಮವಾಗಿ ದೇವೇಗೌಡರು ಯಾವ ದಾಳ ಉರುಳಿಸಿ ಸಿಡಿದೆದ್ದಿರುವ ರೇವಣ್ಣರನ್ನು ಕೂಲ್ ಮಾಡುತ್ತಾರೆ. ಅಥವಾ ರೇವಣ್ಣರ ಬೇಡಿಕೆಯಂತೆ ಹಾಸನದ ಟಿಕೆಟ್ ಭವಾನಿಗೆ ಎಂದು ಘೋಷಣೆ ಮಾಡಿ ಕುಟುಂಬಗೊಳಗೆ ಅಗಬಹುದಾದ ದೊಡ್ಡ ಅಂತರ್ಯುದ್ದಕ್ಕೆ ಬ್ರೇಕ್ ಹಾಕ್ತಾರಾ? ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES