ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದ ಸಮಾರಂಭದಲ್ಲಿ ಗುಜರಾತ್ನ ಅಮುಲ್ ಹಾಗೂ ಕರ್ನಾಟಕದ ಕೆಎಂಎಫ್ ನಡುವೆ ಸಹಕಾರ ತರುವ ವಿಚಾರ ಪ್ರಸ್ತಾಪಿಸಿದ್ದರು. ಅದೀಗ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ಶಾಸಕ ಸಿ.ಟಿ ರವಿ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
ಅಮುಲ್ ಜೊತೆ ಕೆಎಂಎಫ್ ಅನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದ್ದು, ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ. ಹೀಗಾಗಿ, ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರನ್ನು ತರಾಟೆ ತೆಗೆದುಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ, ತಮ್ಮ ಭಾಷೆಯ ಉಳಿವಿಗಾಗಿ, ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗಾಗಿ ಹೋರಾಡಿದಾಗೆಲ್ಲ ಅಣಕಿಸುವ, ಟೀಕಿಸುವ ಸಿ.ಟಿ ರವಿಯವರೇ, ನಿಮಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ, ತಾತ್ಸಾರ? ಸಿ.ಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ! ಕನ್ನಡಕ್ಕೆ ಕಂಟಕ ರವಿ! ಎಂದು ವ್ಯಂಗ್ಯವಾಡಿದೆ.
◆ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ.
◆ಮೊಸರಿಗೆ ದಹಿ ಎಂದರೂ ಸಮರ್ಥನೆ
◆ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ
◆ಹಿಂದಿ ಹೇರಿಕೆಗೂ ಸಮರ್ಥನೆ.@CTRavi_BJP,
ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ.#ಕರ್ನಾಟಕವಿರೋಧಿಬಿಜೆಪಿ pic.twitter.com/YTuJVx8A8w— Karnataka Congress (@INCKarnataka) April 8, 2023
ಇದನ್ನೂ ಓದಿ : ಡಿ.ಕೆ ಶಿವಕುಮಾರ್ ‘ಅದೊಂದು ಹುಚ್ಚಮುಂಡೆದು’ : ಸಿ.ಎಂ ಇಬ್ರಾಹಿಂ ಲೇವಡಿ
ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ. ಮೊಸರಿಗೆ ದಹಿ ಎಂದರೂ ಸಮರ್ಥನೆ. ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ. ಹಿಂದಿ ಹೇರಿಕೆಗೂ ಸಮರ್ಥನೆ. ಸಿ.ಟಿ ರವಿ ಅವರೇ, ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ ಎಂದು ತರಾಟೆ ತೆಗೆದುಕೊಂಡಿದೆ.
ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ, ತಮ್ಮ ಭಾಷೆಯ ಉಳಿವಿಗಾಗಿ, ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗಾಗಿ ಹೋರಾಡಿದಾಗೆಲ್ಲ ಅಣಕಿಸುವ, ಟೀಕಿಸುವ ಸಿ.ಟಿ ರವಿಯವರೇ,
ನಿಮಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ, ತಾತ್ಸಾರ?
ಸಿಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ! ಕನ್ನಡಕ್ಕೆ ಕಂಟಕ ರವಿ!@CTRavi_BJP
— Karnataka Congress (@INCKarnataka) April 8, 2023
ಬಿಜೆಪಿ ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ. ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು. ಕೆಎಂಎಫ್ ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.