Monday, December 23, 2024

ನೋಡ್ರಪ್ಪ.. ಮಾಮ ಹೆಲ್ಪ್ ಮಾಡಿದ್ರೆ 30% ಕೊಡಿ : ಕಿಚ್ಚ ಸುದೀಪ್ ಗೆ ಟಾಂಗ್ ಕೊಟ್ಟ ಪ್ರಕಾಶ್ ರೈ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಟ ಕಿಚ್ಚ ಸುದೀಪ್ ಬೆಂಬಲ ಸೂಚಿಸಿರುವುದು ಗೊತ್ತೇ ಇದೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಸಿಎಂ ಬೊಮ್ಮಾಯಿ ಅವರಿಗೆ, ಬೆಂಬಲ ಸೂಚಿಸಿರುವ ನಟ ಕಿಚ್ಚ ಸುದೀಪ್, ‘ನಾನು ಬೊಮ್ಮಾಯಿ ಮಾಮನ ಪರ ಪ್ರಚಾರ ಮಾಡುತ್ತೇನೆ’ ಎಂದಿದ್ದರು. ಇದಕ್ಕೆ ನಟ ಪ್ರಕಾಶ್ ರೈ ಸರಣಿ ಟ್ವಿಟ್ ಮೂಲಕ ಟಾಂಗ್ ನೀಡಿದ್ದಾರೆ.

ನಟ ಸುದೀಪ್ ಹೇಳಿಕೆಗೆ ಪರೋಕ್ಷವಾಗಿ ಕುಟುಕಿರುವ ಪ್ರಕಾಶ್ ರೈ ಅವರು, ನೋಡ್ರಪ್ಪ.. ನಿಮ್ ಮಾಮನೊ, ಅತ್ತೇನೊ ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%, 20% ಇಲ್ಲ 30% ಕೊಡಿ, ಅದು ನಿಮ್ಮಿಷ್ಟ. ಆದ್ರೆ ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೇಡಿ ಎಂದು ವ್ಯಂಗ್ಯವಾಡಿದ್ದಾರೆ.

ಜನ ದನಿಗೆ ಉತ್ತರಿಸಲು ಸಿದ್ಧರಾಗಿ

ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ.. ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

RELATED ARTICLES

Related Articles

TRENDING ARTICLES